ದಿನದಿಂದ ದಿನಕ್ಕೆ ಉತ್ತರ ಪ್ರದೇಶದಲ್ಲಿ ಹಲ್ಲೆಗಳು,ಹತ್ಯೆಗಳು ನಿರಂತರವಾಗಿ ನಡೆಯುತ್ತಲೇ ಇದೆ. ಅದರ ಮುಂದುವರಿದ ಭಾಗವಾಗಿ ಇನ್ನೊಂದು ಅಮಾನವೀಯವಾಗಿ ಹಲ್ಲೆ ನಡೆಸಿದ ಘಟನೆ ವರದಿಯಾಗಿದೆ.
ಉತ್ತರಪ್ರದೇಶ ರಾಜ್ಯದ ಗಾಜಿಯಾಬಾದ್ ಎಂಬಲ್ಲಿನ ದಾಸನ ದೇವಿ ಮಂದಿರ್ ದೇವಾಲಯದಲ್ಲಿ ಬಾಯಾರಿಕೆ ನೀಗಿಸಲು ನೀರು ಕುಡಿದ ಎಂಬ ಕಾರಣಕ್ಕೆ ಒಬ್ಬ ಮುಸ್ಲಿಂ ಬಾಲಕನೊಬ್ಬನ ಮೇಲೆ ಶೃಂಗಿ ನಂದನ್ ಯಾದವ್ ಎಂಬ ವ್ಯಕ್ತಿಯು ನಿರ್ದಯವಾಗಿ ಹಲ್ಲೆ ನಡೆಸಿರುವ ಘಟನೆ ನಡದಿದೆ. ಆರೋಪಿಯು ಹಲ್ಲೆ ನಡೆಸುವ ವಿಡಿಯೋ ತುಣುಕು ಕೂಡಾ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಅದಲ್ಲದೇ ಹಿಂದುಏಕತಾ ಸಂಘ್ ಎಂಬ ಇನ್ಸ್ಟಗ್ರಾಮ್ ಖಾತೆಯಲ್ಲೂ ಕೂಡ ಮುಸ್ಲಿಂ ಬಾಲಕನಿಗೆ ಕ್ರೂರವಾಗಿ ಹಲ್ಲೆ ಮಾಡುವ ವಿಡಿಯೋವನ್ನು ಅಪ್ಲೋಡ್ ಮಾಡಿ, ಇಂತಹ ಧರ್ಮರಕ್ಷಣೆಯ ಕೆಲಸಗಳಿಗಾಗಿ, ಕೇಸುಗಳ ವಿರುದ್ಧ ಹೋರಾಡುವುದಕ್ಕಾಗಿ ದೇಣಿಗೆ ನೀಡುವಂತೆ ಮನವಿ ಮಾಡಲಾಗಿದೆ ಎಂದು ವರದಿಯಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಗಾಜಿಯಾಬಾದ್ ಪೊಲೀಸರು ಆರೋಪಿ ಶೃಂಗಿ ಯಾದವ್ನನ್ನು ಬಂಧಿಸಿದ್ದಾರೆ.