ಡೆಹ್ರಾಡುನ್: ಉತ್ತರಾಖಂಡದ ರಾಜ್ಯದ ನೂತನ ಮುಖ್ಯಮಂತ್ರಿ ತೀರಥ್ ಸಿಂಗ್ ರಾವತ್ ಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ. ಈ ಬಗ್ಗೆ ಅವರು
ತಮ್ಮ ಅಧಿಕೃತ ಟ್ವೀಟರ್ ಖಾತೆಯಲ್ಲಿ ತಿಳಿಸಿದ್ದಾರೆ.
ನನಗೆ ಕೊರೋನಾ ಟೆಸ್ಟ್ ಪಾಸಿಟಿವ್ ವರದಿ ಬಂದಿದೆ. ನನನ್ನ ಆರೋಗ್ಯ ಸ್ಥಿತಿ ಚನ್ನಾಗಿದೆ, ಯಾವುದೇ ರೀತಿಯ ತೊಂದರೆ ನನಗಿಲ್ಲ. ವೈದ್ಯರ ಸಲಹೆಯಂತೆ ನಾನೇ ಪ್ರತ್ಯೇಕವಾಗಿದ್ದೇನೆ. ಕೆಲ ದಿನಗಳಿಂದ ನನ್ನ ಸಂಪರ್ಕದಲ್ಲಿದ್ದವರು ಜಾಗೃತಿವಹಿಸಿ ಮತ್ತು ನೀವೂ ಕೊರೋನಾ ಟೆಸ್ಟ್ ಮಾಡಿಸಿಕೊಳ್ಳಿ ಎಂದು ಸಿಎಂ ರಾವತ್ ಟ್ವೀಟ್ ಮೂಲಕ ಹೇಳಿದ್ದಾರೆ.