ಉತ್ತರ ಪ್ರದೇಶ: ಕೊಳಕು ಪರಿಸರದಲ್ಲಿ ಉಂಟಾಗುವ ಯೆಲ್ಲೋ ಫಂಗಸ್ ಪತ್ತೆ! ಬ್ಲಾಕ್, ವೈಟುಗಳಿಗಿಂತಲೂ ಮಾರಣಾಂತಿಕ : ತಜ್ಞರು

Share on facebook
Share on twitter
Share on linkedin
Share on whatsapp
Share on telegram
Share on email
Share on print

ಲಕ್ನೋ: ಕೋವಿಡ್ ಎರಡನೇ ಅಲೆಯ ಜೊತೆಗೆ ಅಲ್ಲಲ್ಲಿ ಬ್ಲಾಕ್ ಫಂಗಸ್ ಬಗ್ಗೆ ಕೇಳಿದೆವು. ತೀರಾ ಇತ್ತೀಚೆಗೆ ವೈಟ್ ಫಂಗಸ್ ಕೂಡಾ ಪತ್ತೆಯಾಗಿರುವುದು ಸುದ್ಧಿಯಾಗಿತ್ತು. ಕಾಕತಾಳೀಯವೆನ್ನಬೇಕೋ? ಒಂದರ ಹಿಂದೆ ಒಂದರಂತೆ ಬರುವ ದುರಂತವೆನ್ನಬೇಕೋ? ಇದೀಗ ವಿಲಕ್ಷಣಯೆಲ್ಲೋ ಫಂಗಸ್ಪತ್ತೆಯಾಗಿದೆ!

ಹೌದು, ಸಾಮಾನ್ಯವಾಗಿ ಕೊಳಕು ಪರಿಸರದಲ್ಲಿ ಉಂಟಾಗುವ ಯೆಲ್ಲೋ ಫಂಗಸ್ಉತ್ತರ ಪ್ರದೇಶದ ಗಾಝಿಯಾಬಾದ್ ಎಂಬಲ್ಲಿ ಪತ್ತೆಯಾಗಿದೆ. ತಜ್ಞರ ಪ್ರಕಾರ ಯೆಲ್ಲೋ ಫಂಗಸ್ ಎನ್ನುವುದು ವರೆಗೆ ಸುದ್ಧಿಯಲ್ಲಿದ್ದ ಬ್ಲಾಕ್ ಮತ್ತು ವೈಟುಗಳಿಗಿಂತಲೂ ಮಾರಣಾಂತಿಕ!

ಉಳಿದೆರೆಡು ಶಿಲೀಂಧ್ರಗಳು ಸಾಮಾನ್ಯವಾಗಿ ಮಾನವನ ಬಾಹ್ಯ ಅಂಗಗಳನ್ನು ಬಾಧಿಸಿದರೆ, ಯೆಲ್ಲೋ ಫಂಗಸುಗಳು ಶರೀರದ ಆಂತರಿಕ ಭಾಗಗಳಿಗೆ ಕೇಡುಂಟು ಮಾಡುವುದು. ಕೀವು, ಗಾಯದ ನಿಧಾನಗತಿಯ ಒಣಗುವಿಕೆ ಮತ್ತು ಕೆಲವು ಗಂಭೀರ ಪ್ರಕರಣಗಳಲ್ಲಿ ಬಹು ಅಂಗಾಂಗ ವೈಫಲ್ಯಜೀವಕೋಶಗಳಿಗೆ ಹಾನಿ ಇತ್ಯಾದಿಗಳೂ ಉಂಟಾಗುವ ಸಾಧ್ಯತೆಗಳಿವೆ. ಯೆಲ್ಲೋ ಫಂಗಸ್ ಮಾರಣಾಂತಿಕವಾಗಿದ್ದರೂ ಕೂಡಾ, ಹೆಚ್ಚಿನ ಪ್ರಕರಣಗಳು ಪತ್ತೆಯಾದ ಕುರಿತು ವರದಿಯಾಗಿಲ್ಲ. ಹಾಗಾಗಿಯೇ ಸದ್ಯಕ್ಕೆ ಆತಂಕ ಪಡಬೇಕಾದ ಅಗತ್ಯವೂ ಇಲ್ಲವೆಂದು ವೈದ್ಯಕೀಯ ಮೂಲಗಳು ತಿಳಿಸಿವೆ.

ಗಾಝಿಯಾಬಾದಿನ ತಜ್ಞವೈದ್ಯ ಬಿ.ಪಿ. ತ್ಯಾಗಿ ಅವರ ಪ್ರಕಾರ, ವೈಟ್ ಫಂಗಸ್ ಶ್ವಾಸಕೋಶಗಳನ್ನು ಬಾಧಿಸಿದರೆ, ಬ್ಲಾಕ್ ಫಂಗಸ್ ಮೆದುಳನ್ನು ಬಾಧಿಸುವುದು. ಆದರೆ ಯೆಲ್ಲೋ ಫಂಗಸ್ ಎರಡೂ ಅವಯವಗಳನ್ನು ಬಾಧಿಸುವುದು. ಮನುಷ್ಯರಲ್ಲದೇ ಕೆಲವೊಂದು ಪ್ರಾಣಿಗಳಲ್ಲೂ ಇದು ಕಂಡು ಬರುವ ಸಾಧ್ಯತೆಯಿದೆಯೆಂದು ಅವರು ಹೇಳುತ್ತಾರೆ.

ಸೋಂಕು ತಗುಲಿದ ನಂತರ ವಿರೂಪಗೊಂಡ ಮುಖ, ಊತ, ಅತಿಯಾದ ಬಳಲಿಕೆ, ದಣಿವು, ಅಜೀರ್ಣ, ಆಹಾರ ಸೇವನೆಯಲ್ಲಿ ನಿರಾಸಕ್ತಿ, ತೂಕ ಕಡಿಮೆಯಾಗುವುದು, ಕಣ್ಣು ಕಂಪಾಗುವಿಕೆ ಇತ್ಯಾದಿ ಲಕ್ಷಣಗಳನ್ನು ಕಂಡು ಬರುವ ಸಾಧ್ಯತೆಯಿದೆಯೆಂದು ತಜ್ಞರು ಹೇಳುತ್ತಾರೆ.

ಕೊಳಕು ವಾತಾವರಣ ಮತ್ತು ಸ್ವಚ್ಛತೆಯ ಕೊರತೆಯೇ ಫಂಗಸ್ ಉಂಟಾಗಲು ಮೂಲ ಕಾರಣವೆನ್ನಲಾಗಿದೆ. ಕಲುಷಿತ ಆಹಾರಸೇವನೆ, ಆಹಾರಗಳ ಅಸಮರ್ಪಕ ವಿಲೇವಾರಿ, ಸ್ಟಿರಾಯ್ಡ್ ಔಷಧಿಗಳ ಮಿತಿಮೀರಿದ ಬಳಕೆ, ತಪ್ಪಾದ ರೀತಿಯಲ್ಲಿ ಆಕ್ಸಿಜನ್ ನೀಡುವುದು ಕೂಡಾ ಯೆಲ್ಲೋ ಫಂಗಸ್ ತಗುಲಲು ಕಾರಣವಾಗಬಲ್ಲದು.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು