ಉತ್ತರ ಪ್ರದೇಶ : ಕೋವಿಡ್ ಸೋಂಕಿನಿಂದ ಇಬ್ಬರು ಬಿಜೆಪಿ ಶಾಸಕರ ಸಾವು | ಸವಲತ್ತುಗಳ ಕೊರತೆಯಿಂದ ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡಿದ ಶಾಸಕ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಲಕ್ನೋ: ಉತ್ತರ ಪ್ರದೇಶದಲ್ಲಿ ಕೊರೋನಾ ಸೋಂಕು ತೀವ್ರವಾಗಿ ಹರಡುತ್ತಿದ್ದು, ಬಿಜೆಪಿಯ ಇಬ್ಬರು ಶಾಸಕರನ್ನು ಬಲಿ ಪಡೆದುಕೊಂಡಿದೆ.

ಲಕ್ನೋ ನಗರದ ಶಾಸಕನಾಗಿರುವ ಸುರೇಶ್ ಕುಮಾರ್ ಶ್ರೀವಾತ್ಸವ್ (76) ಹಾಗೂ  ಔರಯ್ಯ ಸದರಿನ ಶಾಸಕ ರಮೇಶ್ ಚಂದ್ರ ದಿವಾಕರ್ (56) ಎಂಬವರೇ ಕೋವಿಡ್ ರೋಗಕ್ಕೆ ಬಲಿಯಾದವರು. ಇವರು ಕಳೆದ ಕೆಲವು ದಿನಗಳ ಹಿಂದೆ ಕೋವಿಡ್ ಬಾಧಿತರಾಗಿ ಚಿಕಿತ್ಸೆಯಲ್ಲಿದ್ದರು ಎಂದು ಪಕ್ಷದ ಮೂಲಗಳು ತಿಳಿಸಿವೆ.

ರಕ್ಷಣಾ ಸಚಿವ ರಾಜನಾಥ್ ಸಿಂಗ್, ಕುಮಾರ್ ಶ್ರೀವಾತ್ಸವ್ ಅವರ ನಿಧನಕ್ಕೆ ತೀವ್ರ ಸಂತಾಪ ಸೂಚಿಸಿ, ಟ್ವೀಟ್ ಮಾಡಿದ್ದಾರೆ. ಹಾಗೆಯೇ ದಿವಾಕರ್ ಸಾವಿಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಅದಿತ್ಯನಾಥ ಕೂಡಾ ಸಂತಾಪ ವ್ಯಕ್ತಪಡಿಸಿದ್ದಾರೆ.

ಶಾಸಕ ದಿವಾಕರ ಪತ್ನಿ ಮತ್ತು ಮಗನಿಗೂ ಕೋವಿಡ್ ತಗುಲಿದ್ದು, ಖಾನ್‍ಪುರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆಂದು ವರದಿಯಾಗಿದೆ. ಆಸ್ಪತ್ರೆಗಳಲ್ಲಿ ಸವಲತ್ತುಗಳ ಕೊರತೆಯಿಂದಾಗಿ ಇವರಿಬ್ಬರ ಸ್ಥಿತಿಯೂ ಗಂಭೀರವಾಗಿದೆಯೆಂದು ತಿಳಿದುಬಂದಿದೆ.

ರಮೇಶ್ ಚಂದ್ರ ದಿವಾಕರನ ಸಹೋದರ ಲಾಲ್ ಜಿ ದಿವಾಕರನ ಹೇಳಿಕೆಯಂತೆ, ಕಾನ್ಪುರ ಆಸ್ಪತ್ರೆಯಲ್ಲಿ ವೈದ್ಯಕೀಯ ಸವಲತ್ತುಗಳ ಕೊರತೆಯಿಂದ ಶಾಸಕ ರಮೇಶನನ್ನು ಔರಯ್ಯದಲ್ಲಿರುವ ಆತನ ತೋಟದ ಮನಗೆ ಕರೆದುಕೊಂಡು ಬಂದು ಅಲ್ಲೇ ಆಕ್ಸಿಜನ್ ನೀಡಲಾಯಿತು. ಆದರೆ ಪರಿಸ್ಥಿತಿಯಲ್ಲಿ ಯಾವುದೇ ಸುಧಾರಣೆ ಕಂಡು ಬರದ ಹಿನ್ನೆಲೆಯಲ್ಲಿ ಗಾಝಿಯಾಬಾದಿಗೆ ಸಾಗಿಸಲಾಯಿತು. ಅಲ್ಲೂ ಸಮರ್ಪಕ ಚಿಕಿತ್ಸೆ ಸಿಗದ ಕಾರಣ ಮೀರತಿನಲ್ಲಿರುವ ಎಲ್‍ಎಲ್‍ಆರ್‍ಎಮ್ ಆಸ್ಪತ್ರೆಗೆ ಸಾಗಿಸಲಾಯಿತು.

ಮೀರತಿನಲ್ಲಿ ಹಾಸಿಗೆ ಸಿಕ್ಕಿದರೂ, ಚಿಕಿತ್ಸೆ ಫಲಕಾರಿಯಾಗದೇ ರಮೇಶ್ ಮೃತಪಟ್ಟಿದ್ದಾರೆ. ಅಂತ್ಯ ಸಂಸ್ಕಾರವನ್ನು ಸ್ವಂತ ಊರಾದ ಔರಯ್ಯದಲ್ಲೇ ನಡೆಸಲಾಗುವುದೆಂದು ಕುಟುಂಬದ ಮೂಲಗಳು ತಿಳಿಸಿವೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು