ಅಬುಧಾಬಿ(9-11-2020): ಯುಎಇಗೆ ಡ್ರೋನ್ ಮಾರಾಟ ಮಾಡುವುದನ್ನು ನಿಲ್ಲಿಸಬೇಕೆಂದು ಅಮ್ನೆಸ್ಟಿ ಇಂಟರ್ ನ್ಯಾಶನಲ್ ಅಮೇರಿಕಾವನ್ನು ಆಗ್ರಹಿಸಿದೆ. ಯುದ್ಧ ಪೀಡಿತ ಯಮನ್, ಲಿಬಿಯಾಗಳಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ನಾಗರಿಕರು ಸಾವಿಗೀಡಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅಮ್ನೆಸ್ಟಿಯ ಈ ಹೇಳಿಕೆ ಹೊರಬಿದ್ದಿದೆ.
ಹದಿನೈದರಿಂದ ಇಪ್ಪತ್ತು ಶಸ್ತ್ರಸಜ್ಜಿತ “ಎಮ್ ಕ್ಯೂ 9 ಬಿ” ಡ್ರೋನುಗಳನ್ನು ಅಮೇರಿಕಾವು ಯುಎಇಗೆ ಮಾರಾಟ ಮಾಡಲು ಉದ್ದೇಶಿಸಿದೆ.