ನವದೆಹಲಿ(04-10-2020): ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್(ಯುಪಿಎಸ್ಸಿ) ನಾಗರಿಕ ಸೇವೆಗಳ 2020ರ ಪ್ರಾಥಮಿಕ ಪರೀಕ್ಷೆ ಇಂದು ನಡೆದಿತ್ತು. ಆದರೆ ಪರೀಕ್ಷಾ ಕೇಂದ್ರಗಳಲ್ಲಿ ಯಾವುದೇ ಕೋವಿಡ್ ನಿಬಂಧನೆಗಳನ್ನು ಅನುಸರಿಸಲಾಗಿಲ್ಲ ಎಂದು ಅಭ್ಯರ್ಥಿಗಳು ಹೇಳಿದ್ದಾರೆ.
ಕೋವಿಡ್ -19 ಸಾಂಕ್ರಾಮಿಕದ ಮಧ್ಯೆ, ಯುಪಿಎಸ್ಸಿ ಪರೀಕ್ಷೆ ಕೇಂದ್ರಗಳಲ್ಲಿ ಸಾಮಾಜಿಕ ದೂರ ಮತ್ತು ಕೋವಿಡ್ -19 ಮಾರ್ಗಸೂಚಿಗಳನ್ನು ಅನುಸರಿಸುವ ಬಗ್ಗೆ ಭರವಸೆಯನ್ನು ನೀಡಿತ್ತು. ಕೆಲವು ಕೇಂದ್ರಗಳು ನಿಯಮಗಳನ್ನು ಅನುಸರಿಸಿದರೆ, ಇನ್ನು ಕೆಲವೆಡೆ ಸನ್ನಿವೇಶವು ವಿಭಿನ್ನವಾಗಿತ್ತು.
ವಿದ್ಯಾ ಮಂದಿರ ಹಿರಿಯ ಮಾಧ್ಯಮಿಕ ಶಾಲೆ, ಆರ್ಯ ನಗರ, ಬಲ್ಲಾಬ್ಗರ್, ಫರಿದಾಬಾದ್ ನಲ್ಲಿ ಯುಪಿಎಸ್ಸಿ ಆಕಾಂಕ್ಷಿಯೊಬ್ಬರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ಸಾಮಾಜಿಕ ದೂರದ ಮಾನದಂಡಗಳನ್ನು ಕಡೆಗಣಿಸಲಾಗಿದೆ ಎಂದು ನಮಗೆ ತಿಳಿದಿತ್ತು, ಆದರೆ ಪರೀಕ್ಷಾ ಕೇಂದ್ರದಲ್ಲಿ ಅಭ್ಯರ್ಥಿಗಳಿಗೆ ಯಾವುದೇ ನೈರ್ಮಲ್ಯೀಕರಣ ಸೌಲಭ್ಯ ಲಭ್ಯವಿಲ್ಲ, ಮತ್ತು ಯಾವುದೇ ಥರ್ಮಲ್ ಸ್ಕ್ರೀನಿಂಗ್ ವ್ಯವಸ್ಥೆಯನ್ನು ಕೂಡ ಮಾಡಲಾಗಿಲ್ಲ ಎಂದು ಹೇಳಿದ್ದಾರೆ.