‘ಅತ್ಯಾಚಾರ ಆರೋಪಿ’ಗೆ ಟಿಕೆಟ್ ಕೊಡುವುದನ್ನು ಪ್ರಶ್ನಿಸಿದ ಕಾಂಗ್ರೆಸ್ ನಾಯಕಿಗೆ ಪಕ್ಷದ ಸಭೆಯಲ್ಲೇ ಥಳಿತ

cngress
Share on facebook
Share on twitter
Share on linkedin
Share on whatsapp
Share on telegram
Share on email
Share on print

ನವದೆಹಲಿ(11-10-2020): ಮುಂಬರುವ ಉಪಚುನಾವಣೆಗೆ ‘ಅತ್ಯಾಚಾರ ಆರೋಪಿ’ ಅಭ್ಯರ್ಥಿಯನ್ನು ನಾಮನಿರ್ದೇಶನ ಮಾಡಿರುವುದನ್ನು ವಿರೋಧಿಸಿದ ಮಹಿಳಾ ಕಾಂಗ್ರೆಸ್ ಕಾರ್ಯಕರ್ತೆ ತಾರಾ ಯಾದವ್  ಅವರಿಗೆ ಉತ್ತರ ಪ್ರದೇಶದ ಡಿಯೋರಿಯಾದಲ್ಲಿ ನಡೆದ ಪಕ್ಷದ ಆಂತರಿಕ ಸಭೆಯಲ್ಲಿ ಥಳಿಸಲಾಗಿದೆ.

ಅತ್ಯಾಚಾರ ಆಪಾದಿತ ವ್ಯಕ್ತಿ ಮುಕುಂದ್ ಭಾಸ್ಕರ್ ಮಣಿಗೆ ಪಕ್ಷ ಟಿಕೆಟ್ ನೀಡಿದೆ. ಪಕ್ಷದ ಕಾರ್ಯದರ್ಶಿ ಸಚಿನ್ ನಾಯಕ್ ಅವರು ತಪ್ಪಾದ ವ್ಯಕ್ತಿಗೆ ಟಿಕೆಟ್ ನೀಡಿದ್ದಾರೆ ಎಂದು ಹೇಳಿದ ನಂತರ ಆಕೆಗೆ ಥಳಿಸಲಾಯಿತು ಎಂದು ಕಾಂಗ್ರೆಸ್ ಕಾರ್ಯಕರ್ತ ಆರೋಪಿಸಿದ್ದಾರೆ. ಇದು ಸಮಾಜದಲ್ಲಿ ಹಳೆಯ ಪಕ್ಷದ ಚಿತ್ರಣವನ್ನು ಹಾಳು ಮಾಡುತ್ತದೆ ಎಂದು ಹೇಳಿದ್ದಾರೆ.

ಮುಂಬರುವ ಉಪಚುನಾವಣೆಗಾಗಿ ಅತ್ಯಾಚಾರಿ ಮುಕುಂದ್ ಭಾಸ್ಕರ್ ಅವರಿಗೆ ಟಿಕೆಟ್ ನೀಡುವ ಪಕ್ಷದ ನಿರ್ಧಾರವನ್ನು ನಾನು ಪ್ರಶ್ನಿಸಿದಾಗ ಪಕ್ಷದ ಕಾರ್ಯಕರ್ತರು ನನ್ನನ್ನು ಥಳಿಸಿದ್ದಾರೆ. ಈಗ, ಪ್ರಿಯಾಂಕಾ ಗಾಂಧಿ ಜಿ ಕ್ರಮ ತೆಗೆದುಕೊಳ್ಳಲು ನಾನು ಕಾಯುತ್ತಿದ್ದೇನೆ ಎಂದು ಅವರು ಹೇಳಿದ್ದಾರೆ.

ಮತ್ತೊಂದೆಡೆ ತ್ರಿಪಾಠಿ ಅವರು ತಾರಾ ಅವರ ಆರೋಪಗಳನ್ನು ತಳ್ಳಿಹಾಕಿದ್ದು, ಅವುಗಳನ್ನು ‘ಆಧಾರರಹಿತ’ ಎಂದು ಹೇಳಿದ್ದಾರೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು