ಉತ್ತರ ಪ್ರದೇಶ ಸರಕಾರಕ್ಕೆ ತೀವ್ರ ಮುಖಭಂಗ | ಸ್ವತಃ ಮಧ್ಯ ಪ್ರವೇಶಿಸಿ ಪ್ರಧಾನಿಯ ಕ್ಷೇತ್ರ ಸೇರಿದಂತೆ ಐದು ನಗರಗಳಿಗೆ ಲಾಕ್ಡೌನ್ ಘೋಷಣೆಗೆ ಆದೇಶ ನೀಡಿದ ಹೈಕೋರ್ಟ್

Share on facebook
Share on twitter
Share on linkedin
Share on whatsapp
Share on telegram
Share on email
Share on print

ಲಕ್ನೋ: ಅಲಹಾಬಾದ್ ಉಚ್ಛ ನ್ಯಾಯಾಲಯವು ಉತ್ತರ ಪ್ರದೇಶದಲ್ಲಿ ಕಾನೂನು ಜಾರಿಗೆ ಮುಂದಾಗಿದ್ದು, ಪ್ರಧಾನಿಯ ಕ್ಷೇತ್ರ ವಾರಣಾಸಿ, ಮುಖ್ಯಮಂತ್ರಿಯವರ ಕ್ಷೇತ್ರ ಘೋರಕ್ ಪುರ್ ಸೇರಿದಂತೆ ಐದು ನಗರಗಳಲ್ಲಿ ಲಾಕ್ಡೌನ್ ಘೋಷಣೆ ಮಾಡುವಂತೆ ಆದೇಶಿಸಿದೆ.

ಉತ್ತರ ಪ್ರದೇಶದಲ್ಲೂ ದಿನದಿಂದ ದಿನಕ್ಕೆ ಕೋವಿಡ್ ಪ್ರಕರಣಗಳು ಏರುತ್ತಿದೆ. ಆದರೆ ಅಲ್ಲಿನ ಸರಕಾರವು ಸಕಾಲಿಕ ಕ್ರಮಗಳನ್ನು ಕೈಗೊಳ್ಳದೇ ಅಸಡ್ಡೆ ನೀತಿಯನ್ನು ಅನುಸರಿಸುತ್ತಿದೆಯೆಂಬು ಆರೋಪವು ಕೇಳಿ ಬಂದಿತ್ತುಇದೀಗ ಅದಕ್ಕೆ ಪುಷ್ಠಿ ನೀಡುವಂತೆ ಅಲ್ಲಿನ ಉಚ್ಛ ನ್ಯಾಯಾಲಯವು ಇಂತಹ ಒಂದು ನಡೆಗೆ ಮುಂದಾಗಿದೆ.

ಲಾಕ್ಡೌನ್ ಹೇರಲಾದ ಇತರ ಮೂರು ನಗರಗಳು ಪ್ರಯಾಗ್ ರಾಜ್, ಕಾನ್ ಪುರ್ ಮತ್ತು ರಾಜಧಾನಿ ಲಕ್ನೋ. ಹಣಕಾಸು, ಆರೋಗ್ಯ, ಸಾರಿಗೆ, ಕೈಗಾರಿಕೆ, ವೈಜ್ಞಾನಿಕ ಸಂಸ್ಥೆ,  ಆಡಳಿತಾತ್ಮಕ ಮತ್ತಿತರ ಅತ್ಯಗತ್ಯ ಸೇವೆಗಳ ಹೊರತಾಗಿ ಎಲ್ಲವನ್ನೂ ಎಪ್ರಿಲ್ ಇಪ್ಪತ್ತಾರರ ವರೆಗೆ ಮುಚ್ಚಿಸುವಂತೆ ಹೈಕೋರ್ಟ್ ಆದೇಶ ನೀಡಿದೆ.

ರಾಜ್ಯದಲ್ಲಿ ಕೋವಿಡ್ ಪರಿಸ್ಥಿತಿಯನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದನ್ನು ಪರಿಗಣಿಸಿ ನ್ಯಾಯಾಲಯವು ವಿಚಾರಣೆ ಕೈಗೆತ್ತಿಕೊಂಡಿತ್ತು.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು