ಲಖನೌ(28-11-2020): ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯಾನಾಥ ಅವರಿಗೆ ಕೊಲೆ ಬೆದರಿಕೆ ಹಾಕಿದ್ದಾನೆಂದು 15 ವರ್ಷದ ಬಾಲಕನನ್ನು ಯುಪಿ ಪೊಲೀಸರು ಬಂಧಿಸಿದ್ದಾರೆ
ಆಗ್ರಾ ಮೂಲದ ಬಾಲಕನನ್ನು ಯುಪಿ ಪೊಲೀಸರು ಬಂಧಿಸಿದ್ದಾರೆ. ಬಾಲಕ ಯೋಗಿ ಆದಿತ್ಯಾನಾಥ್ ಅವರನ್ನು ಸ್ಪೋಟಿಸಿ ಕೊಲೆ ಮಾಡುವುದಾಗಿ ಸಂದೇಶವನ್ನು ಸಹಾಯವಾಣಿ ಸಂಖ್ಯೆ 112ಕ್ಕೆ ವಾಟ್ಸಾಪ್ ನಲ್ಲಿ ಕಳುಹಿಸಿದ್ದ.
ಬಾಲಕನ ಬಂಧನದ ಬಗ್ಗೆ ಪೊಲೀಸ್ ಅಧಿಕಾರಿ ಅಂಜುಲ್ ಕುಮಾರ್ ಅವರು ದೃಢಪಡಿಸಿದ್ದಾರೆ. ಈತ 10ನೇ ತರಗತಿಯ ವಿದ್ಯಾರ್ಥಿಯಗಿದ್ದು ಉತ್ತಮ ಕ್ರೀಡಾಪಟು ಕೂಡ ಆಗಿದ್ದಾನೆ.
ಬಾಲಕನ ಬಂಧನದ ಬಗ್ಗೆ ತಾಯಿ ಪ್ರತಿಕ್ರಿಯಿಸಿದ್ದು, ನಾನು ನನ್ನ ಮಗ ಕ್ರೀಡಾ ಕೋಟಾದಲ್ಲಿ ಸರ್ಕಾರಿ ಕೆಲಸ ತೆಗೆದುಕೊಳ್ಳುತ್ತಾನೆ ಎಂದು ಅಂದುಕೊಂಡಿದ್ದೆ. ಆದರೆ ಈಗ ಪೊಲೀಸರು ಅವನನ್ನು ಅಪರಾಧಿಯ ರೀತಿ ಬಂಧಿಸಿದ್ದು, ನಮಗೆ ಭೀತಿ ಉಂಟುಮಾಡಿದೆ ಎಂದು ಕಣ್ಣೀರಿಟ್ಟಿದ್ದಾರೆ.