ದೇವಸ್ಥಾನಕ್ಕೆ ತೆರಳಿದ್ದ ಮಹಿಳೆಯನ್ನು ಗ್ಯಾಂಗ್ ರೇಪ್ ಮಾಡಿ ಖಾಸಗಿ ಭಾಗಕ್ಕೆ ರಾಡ್ ತುರುಕಿಸಿ ಕೊಲೆ! ಅರ್ಚಕ ಸೇರಿ ಹಲವರ ವಿರುದ್ಧ ಕೇಸ್

up
Share on facebook
Share on twitter
Share on linkedin
Share on whatsapp
Share on telegram
Share on email
Share on print

ಉತ್ತರ ಪ್ರದೇಶ(06-01-2021): ಉತ್ತರ ಪ್ರದೇಶದ ಬಾದೌನ್ ಜಿಲ್ಲೆಯಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಕ್ರೂರವಾದ ‘ನಿರ್ಭಯಾ’ ಪ್ರಕರಣವನ್ನು ನೆನಪಿಸುತ್ತಿದೆ.

ಉಘೈತಿ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯಲ್ಲಿ ಮಧ್ಯವಯಸ್ಕ ಮಹಿಳೆಯೊಬ್ಬರು ದೇವಸ್ಥಾನಕ್ಕೆ ಹೋಗಿದ್ದರು ಮತ್ತು ಅವರು ಬಳಿಕ ಹಿಂದಿರುಗಲಿಲ್ಲ.

ನ್ಯೂಸ್ 18 ವರದಿಯ ಪ್ರಕಾರ, ಸ್ಥಳೀಯರು ಬೆಳಿಗ್ಗೆ 12 ಗಂಟೆ ಸುಮಾರಿಗೆ ಒಂದು ಕಾರಿನಲ್ಲಿ ಬಂದ ದುಷ್ಕರ್ಮಿಗಳು ರಕ್ತಸ್ರಾವವಾಗುತ್ತಿದ್ದ ಮಹಿಳೆಯನ್ನು ಬಿಟ್ಟು ಹೋಗಿರುವುದನ್ನು ಗಮನಿಸಿದ್ದಾರೆ.

ಉಘೈತಿಯ ಪೊಲೀಸ್ ಠಾಣೆ ಅಧಿಕಾರಿ ರವೇಂದ್ರ ಪ್ರತಾಪ್ ಸಿಂಗ್ ಅವರು ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸಂತ್ರಸ್ತೆಯ ಕುಟುಂಬದ ಸದಸ್ಯರು ಆರೋಪಿಸಿದ್ದಾರೆ.

ಪೊಲೀಸರು ಇದನ್ನು ಅಪಘಾತದ ಪ್ರಕರಣವೆಂದು ದಾಖಲಿಸಲು ಸಹ ಪ್ರಯತ್ನಿಸಿದರು. ನಂತರ ಮೃತದೇಹವನ್ನು ಮಹಿಳಾ ವೈದ್ಯರು ಸೇರಿದಂತೆ ಮೂವರು ವೈದ್ಯರ ಸಮಿತಿಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

ಮರಣೋತ್ತರ ವರದಿಯು ಮಹಿಳೆಯ ಪಕ್ಕೆಲುಬುಗಳು ಮತ್ತು ಕಾಲು ಮುರಿತಗೊಂಡಿದೆ ಮತ್ತು ಆಕೆಯ ಖಾಸಗಿ ಭಾಗಗಳಲ್ಲಿ ಮಾರಣಾಂತಿಕ ಗಾಯಗಳಾಗಿವೆ ಎಂದು ತಿಳಿಸಿದೆ. ಆಕೆ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿದ್ದಾಳೆ. ಅವಳ ಖಾಸಗಿ ಭಾಗಕ್ಕೆ ರಾಡ್ ತುರುಕಿಸಲಾಗಿದೆ ಎಂದು ವರದಿ ಬಹಿರಂಗಪಡಿಸಿದೆ. ಅವಳ ಶ್ವಾಸಕೋಶಕ್ಕೂ ಭಾರವಾದ ವಸ್ತುವಿನಿಂದ ದಾಳಿ ಮಾಡಲಾಗಿದೆ ಎಂದು ವರದಿ ತಿಳಿಸಿದೆ.

ಅರ್ಚಕ ಸತ್ಯನಾರಾಯಣ್ ದಾಸ್, ಅವರ ಸಹಾಯಕ ಮತ್ತು ಮೇವಾಲಿ ನಿವಾಸಿ ವೆದ್ರಾಮ್ ಮತ್ತು ಚಾಲಕ ಜಸ್ಪಾಲ್ ವಿರುದ್ಧ ಉಘೈತಿ ಪೊಲೀಸರು ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣ ದಾಖಲಿಸಿದ್ದಾರೆ. ಪರಾರಿಯಾಗಿದ್ದ ಆರೋಪಿಗಳನ್ನು ಬಂಧಿಸಲು ನಾಲ್ಕು ತಂಡಗಳನ್ನು ರಚಿಸಲಾಗಿದೆ.

 

 

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು