ಯೋಗಿಯ ಮತಾಂತರ ನಿಷೇಧ ಮಸೂದೆಗೆ ರಾಜ್ಯಪಾಲರ ಅಂಕಿತ| ಇನ್ನು ಅನ್ಯಧರ್ಮದವರು ಪ್ರೀತಿಸಿ ಮದುವೆಯಾದರೆ ಕಠಿಣ ಶಿಕ್ಷೆ!

anandi ben patel
Share on facebook
Share on twitter
Share on linkedin
Share on whatsapp
Share on telegram
Share on email
Share on print

ಉತ್ತರ ಪ್ರದೇಶ (28-11-2020): ಯುಪಿ ಸರಕಾರದ ವಿವಾಹಕ್ಕಾಗಿ ಮತಾಂತರ ನಿಷೇಧ ಸುಗ್ರಿವಾಜ್ಞೆಗೆ ರಾಜ್ಯಪಾಲೆ ಆನಂದಿ ಬೆನ್ ಸಹಿ ಹಾಕಿದ್ದಾರೆ.

ಉತ್ತರ ಪ್ರದೇಶವು ಬಲ, ಆಮಿಷ ಅಥವಾ ಇತರ ಯಾವುದೇ ಮೋಸದ ವಿಧಾನಗಳ ಮೂಲಕ ಅಥವಾ ವಿವಾಹದ ಉದ್ದೇಶಕ್ಕಾಗಿ ಧಾರ್ಮಿಕ ಮತಾಂತರದ ವಿರುದ್ಧ ಕಾನೂನು ತಂದಿರುವ ಮೊದಲ ರಾಜ್ಯವಾಗಿದೆ.

ಯುಪಿ ಕಾನೂನುಬಾಹಿರ ಧರ್ಮ ಪರಿವರ್ತನೆ ನಿಷೇಧ 2020 ರ ಘೋಷಣೆಯನ್ನು ಘೋಷಿಸಿದ ನಂತರ ಸುಗ್ರೀವಾಜ್ಞೆಗೆ ಮಂಗಳವಾರ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿತ್ತು.

‘ಲವ್ ಜಿಹಾದ್’ ಎಂಬ ಪದವನ್ನು ಬಳಸದಿದ್ದರೂ, ಬಿಜೆಪಿ ನಾಯಕರು ತಾವು ಲವ್ ಜಿಹಾದ್ ತಡೆಯುವ ಕಾನೂನು ಎಂದು ಸಮರ್ಥಿಸಿಕೊಂಡಿದ್ದಾರೆ.

ನೂತನ ಅಧಿನಿಯಮವು ಗರಿಷ್ಠ ಹತ್ತು ವರ್ಷಗಳ ಜೈಲು ಶಿಕ್ಷೆ ಮತ್ತು ನೀತಿ ಉಲ್ಲಂಘಿಸುವವರಿಗೆ 15,000 ರೂ.ದಂಡವನ್ನು ವಿಧಿಸುವ ಹಕ್ಕನ್ನು ಹೊಂದಿದೆ.

ಅಪ್ರಾಪ್ತ ಅಥವಾ ಎಸ್‌ಸಿ ಮತ್ತು ಎಸ್‌ಟಿ ಸಮುದಾಯದ ಬಾಲಕಿಯರು ಮತ್ತು ಮಹಿಳೆಯರ ವಿಷಯದಲ್ಲಿ, ಕನಿಷ್ಠ ಎರಡು ವರ್ಷ ಜೈಲು ಶಿಕ್ಷೆ ಮತ್ತು ಗರಿಷ್ಠ 10 ಜೈಲು ಶಿಕ್ಷೆ ಜೊತೆಗೆ 25 ಸಾವಿರ ರೂ.ದಂಡವನ್ನು ವಿಧಿಸಬಹುದಾಗಿದೆ.

 

 

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು