ಮುಸ್ಲಿಂ ಬಾಲಕಿ ಮೇಲೆ ಆಸಿಡ್ ದಾಳಿ| ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲು

up police
Share on facebook
Share on twitter
Share on linkedin
Share on whatsapp
Share on telegram
Share on email
Share on print

ಲಕ್ನೋ(22-12-2020): ಉತ್ತರ ಪ್ರದೇಶದ ಬಹ್ರೇಚ್ ಜಿಲ್ಲೆಯ 17 ವರ್ಷದ ಮುಸ್ಲಿಂ ಬಾಲಕಿ ಆಸಿಡ್ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದಾಳೆ.

ದುಲ್ದುಲ್ ಹೌಸ್ ಬಳಿ ವಿದ್ಯಾರ್ಥಿನಿಯ ಮುಖ, ಎದೆಯ ಭಾಗ ಮತ್ತು ಕೈಗಳು ತೀವ್ರವಾಗಿ ಸುಟ್ಟುಹೋಗಿವೆ. ಆಕೆಯನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಲಾಯಿತು. ಅವರು ಶೇಕಡಾ 54 ರಷ್ಟು ಸುಟ್ಟಗಾಯಗಳಿಂದ ಗಂಭೀರ ಸ್ಥಿತಿಯಲ್ಲಿದ್ದಾರೆ. ಸ್ಥಳದಿಂದ ಆರೋಪಿ ಪರಾರಿಯಾಗಿದ್ದು ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

ನಜೀರ್‌ಪುರ ಪ್ರದೇಶದ ನಿವಾಸಿ ಬಾಲಕಿ ಸೋಮವಾರ ತನ್ನ ಕೋಚಿಂಗ್ ತರಗತಿಗಾಗಿ ಕಾಜಿಪುರಕ್ಕೆ ಹೋಗಿದ್ದಳು.  ಅವಳು ಕೋಚಿಂಗ್ ತರಗತಿಯಿಂದ ಹಿಂತಿರುಗುವಾಗ, ಓರ್ವ ಅವಳನ್ನು ಹಠಾತ್ತನೆ ನಿಲ್ಲಿಸಿ ಆಸಿಡ್ ಎಸೆದು ಓಡಿಹೋದನು. ಈ ವೇಳೆ ಬಾಲಕಿ ಸಹಾಯಕ್ಕಾಗಿ ಕೂಗಿದ್ದಾಳೆ. ನಂತರ ಜನರು ಸ್ಥಳದಲ್ಲೇ ಒಟ್ಟುಗೂಡಿದರು ಮತ್ತು ಆಸ್ಪತ್ರೆಗೆ ಕರೆದೊಯ್ದರು ಎಂದು ಬಾಲಕಿಯ ತಂದೆ ತಾರಿಕ್ ಅಲಿ ಹೇಳಿದ್ದಾರೆ.

ಬಾಲಕಿ ಚಿಕಿತ್ಸೆ ಪಡೆಯುತ್ತಿದ್ದು, ಆಕೆಯ ಹೇಳಿಕೆ ದಾಖಲಿಸಿದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು