ಯುಪಿ: ಮತಾಂತರ ಹೆಸರಿನಲ್ಲಿ ಸುಳ್ಳಾರೋಪ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಉತ್ತರ ಪ್ರದೇಶ ಶಿಯಾ ವಕ್ಫ್ ಮಂಡಳಿಯ ಮಾಜಿ ಅಧ್ಯಕ್ಷ ವಾಸಿಂ ರಿಜ್ವಿ ಡಿಸೆಂಬರ್ 6 ರಂದು ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ, ರಿಜ್ವಿಯ ಮತಾಂತರದ ನಂತರ ಉತ್ತರ ಪ್ರದೇಶದ 34 ಮುಸ್ಲಿಂ ಕುಟುಂಬಗಳು ಹಿಂದೂ ಧರ್ಮಕ್ಕೆ ಮತಾಂತರಗೊಂಡರು ಎಂಬ ಹೇಳಿಕೆಯೊಂದಿಗೆ ಹಿಂದೂ ಪೂಜಾರಿಯ ಸುತ್ತ ಮುಸ್ಲಿಂ ಜನರು ಸುತ್ತವರೆದಿರುವ ಫೋಟೋವೊಂದನ್ನು ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಹಂಚಿಕೊಳ್ಳುತ್ತಿದ್ದಾರೆ.

ಫೆಬ್ರವರಿ 2022 ರಲ್ಲಿ ನಡೆಯಲಿರುವ ಯುಪಿ ವಿಧಾನಸಭಾ ಚುನಾವಣೆಗೂ ಮುಂಚಿತವಾಗಿ ಈ ಹೇಳಿಕೆಯೊಂದಿರುವ ಪೋಸ್ಟ್‌ ವೈರಲ್ ಆಗುತ್ತಿದೆ ವೈರಲ್‌ ಆದ ಚಿತ್ರವನ್ನು ರಿವರ್ಸ್ ಇಮೇಜ್ ಮೂಲಕ Google ನಲ್ಲಿ ಹುಡುಕಿದಾಗ, ಹಿಂದಿ ಭಾಷೆಯ ಸುದ್ದಿ ಔಟ್ಲೆಟ್ ಅಮರ್ ಉಜಾಲಾ ಈ ಚಿತ್ರವನ್ನು 2016 ರಲ್ಲಿ ಪ್ರಕಟಿಸಿರುವುದು ಕಂಡುಬಂದಿದೆ.

ವೆಬ್‌ಸೈಟ್‌ನ ವರದಿಯ ಪ್ರಕಾರ, ಚಿತ್ರವು ಸೆಪ್ಟೆಂಬರ್ 23, 2016 ರಂದು ಮಥುರಾದ ಜಾಮಾ ಮಸೀದಿಯಲ್ಲಿ ಸೆರೆಹಿಡಿಯಲಾಗಿದೆ. ಇದು ಹಿಂದಿನ ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಮತ್ತು ಕಾಶ್ಮೀರದ ಉರಿ ಪಟ್ಟಣದ ಸಮೀಪವಿರುವ ಭಾರತೀಯ ಸೇನಾ ಬ್ರಿಗೇಡ್ ಪ್ರಧಾನ ಕಚೇರಿಯ ಮೇಲೆ ಭಯೋತ್ಪಾದಕ ದಾಳಿ ನಡೆದ ನಂತರ ಪಾಕಿಸ್ತಾನದ ವಿರುದ್ದ ಪ್ರತಿಭಟನೆ ನಡೆಸಿದ ಸಂದರ್ಭದ್ದು ಎಂದು ವಿವರಿಸಿದೆ. ಈ ಘಟನೆಯ ವೀಡಿಯೊವನ್ನು ಅಮರ್ ಉಜಾಲಾ ಅವರ ವೆಬ್‌ಸೈಟ್‌ನಲ್ಲಿಯೂ ನೋಡಬಹುದು.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು