ಉತ್ತರ ಪ್ರದೇಶ(13-11-2020): ಹತ್ಯೆಗೀಡಾದ ದರೋಡೆಕೋರ ವಿಕಾಸ್ ದುಬೆ ಅವರೊಂದಿಗಿನ ಸಂಬಂಧದ ಕುರಿತ ಆಡಿಯೋ ಕ್ಲಿಪ್ ಬಹಿರಂಗದ ಬೆನ್ನಲ್ಲೇ ಯುಪಿ ಡಿಐಜಿಯನ್ನು ಅಮಾನತುಗೊಳಿಸಲಾಗಿದೆ.
ಹತ್ಯೆಗೀಡಾದ ದರೋಡೆಕೋರ ವಿಕಾಸ್ ದುಬೆ ಅವರೊಂದಿಗಿನ ಸಂಬಂಧ ಬಹಿರಂಗವಾದ ನಂತರ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರ ಉಪ ಪೊಲೀಸ್ ಇನ್ಸ್ ಪೆಕ್ಟರ್ ಜನರಲ್ (ಡಿಐಜಿ) ಅನಂತ್ ದೇವ್ ತಿವಾರಿ ಅವರನ್ನು ಅಮಾನತುಗೊಳಿಸಿದೆ. ಇದರೊಂದಿಗೆ, ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್ಎಸ್ಪಿ) ದಿನೇಶ್ ಪಿ ಅವರಿಗೆ ಶೋ-ಕಾಸ್ ನೋಟಿಸ್ ಕೂಡ ನೀಡಲಾಗಿದೆ.
ಹತ್ಯೆಗೀಡಾದ ದರೋಡೆಕೋರ ವಿಕಾಸ್ ದುಬೆ ಅವರು ಡಿಐಜಿಗೆ ಉತ್ತಮ ಸ್ನೇಹಿತ ಎಂದು ಹೇಳಿಕೊಳ್ಳುವ ಆಡಿಯೋ ಕ್ಲಿಪ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.
ಜುಲೈ 10 ರಂದು ನಡೆದ ಎನ್ಕೌಂಟರ್ನಲ್ಲಿ ದರೋಡೆಕೋರ ಕೊಲ್ಲಲ್ಪಟ್ಟಾಗ ನಾನು ತೀವ್ರವಾಗಿ ಕಣ್ಣೀರಿಟ್ಟಿದ್ದಾನೆ ಎಂದು ಕರೆ ಮಾಡಿದವರಿಗೆ ಅಧಿಕಾರಿ ಹೇಳಿರುವುದು ಆಡಿಯೋದಲ್ಲಿ ಬಹಿರಂಗವಾಗಿತ್ತು.