ಬಾಬರಿ ಮಸೀದಿಗೆ ಬದಲಿಯಾಗಿ ಕಟ್ಟಲಾಗುತ್ತಿರುವ ಮಸೀದಿಗೆ ನಾಮಕರಣ | ‘ಪ್ರಥಮ ಸ್ವಾತಂತ್ರ್ಯ ಹೋರಾಟ’ದಲ್ಲಿ ಹುತಾತ್ಮರಾದ ಮೌಲ್ವಿಯ ಹೆಸರಿಡಲು ತೀರ್ಮಾನ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಲಕ್ನೋ: ಬಾಬರಿ ಮಸೀದಿ ಧ್ವಂಸ ಪ್ರಕರಣದ ತೀರ್ಪಿನಂತೆ ಮುಸ್ಲಿಮರಿಗಾಗಿ ಬೇರೊಂದು ಸ್ಥಳದಲ್ಲಿ ಮಸೀದಿ ನಿರ್ಮಾಣ ಮಾಡಲು ಐದು ಎಕರೆ ಜಾಗ ನೀಡಲಾಗಿತ್ತು. ಅದರಂತೆ ಮಸೀದಿ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ಹೆಸರನ್ನೂ ನಿಶ್ಚಯಿಸಲಾಗಿದೆ.

ನೂತನವಾಗಿ ನಿರ್ಮಾವಾಗುತ್ತಿರುವ ಅಹ್ಮದುಲ್ಲಾಹ್ ಷಾ ಮಸೀದಿಯ ನಕ್ಷೆ

ಪ್ರಥಮ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ, ಹುತಾತ್ಮರಾದ ಮೌಲ್ವಿ ಅಹ್ಮದುಲ್ಲಾ ಷಾ ಫೈಜಾಬಾದಿ ಅವರ ಹೆಸರಿಡಲಾಗುವುದೆಂದು ವರದಿಯಾಗಿದೆ. ಮಸೀದಿ ನಿರ್ಮಾಣ ಕಾರ್ಯದ ಉಸ್ತುವಾರಿ ನೋಡಿಕೊಳ್ಳುತ್ತಿರುವಇಂಡೋ ಇಸ್ಲಾಮಿಕ್ ಕಲ್ಚರಲ್ ಫೌಂಡೇಷನ್ (ಐಐಸಿಎಫ್) ಕಾರ್ಯದರ್ಶಿ ಅಥರ್ ಹುಸೇನ್ ಮಾತನಾಡಿ ಪೂರ್ತಿ ಯೋಜನೆ ಅವರ ಹೆಸರಲ್ಲೇ ಇರುವುದೆಂದು ತಿಳಿಸಿದ್ದಾರೆ.

ಮಸೀದಿ, ಆಸ್ಪತ್ರೆ, ವಸ್ತು ಸಂಗ್ರಹಾಲಯ, ಸಂಶೋಧನಾ ಕೇಂದ್ರ ಹಾಗೂ ಬಡ ಜನರಿಗಾಗಿಸಮುದಾಯ ಅಡುಗೆ ಭವನ‘ ಎಲ್ಲವೂ ನ್ಯಾಯಾಲಯ ನೀಡಿದ ಜಾಗದಲ್ಲಿ ಒಂದೇ ಯೋಜನೆಯ ಭಾಗವಾಗಿ ನಿರ್ಮಾಣವಾಗುತ್ತಿದೆ.

ವರುಷಗಳ ಕಾಲ ಅವಧ್ ಪ್ರಾಂತ್ಯವನ್ನು ಬ್ರಿಟೀಶ್ ಆಳ್ವಿಕೆಯಿಂದ ದೂರ ಇಟ್ಟಿರುವುದಕ್ಕಾಗಿ ಇತಿಹಾಸದಲ್ಲಿ ಫೈಝಾಬಾದಿಯನ್ನು ಸ್ವಾತಂತ್ರ್ಯದ ‘ದೀಪದ ಮನೆಯೆಂದು ಕರೆಯಲಾಗುತ್ತದೆ. ಇವರು ಭವಿಷ್ಯದಲ್ಲಿ ನಡೆದ ಸ್ವಾತಂತ್ರ್ಯ ಚಳವಳಿಗೆ ಗಟ್ಟಿ ಅಡಿಪಾಯವನ್ನು ಹಾಕಿ ಕೊಟ್ಟಿದ್ದಾರೆ. ಕಟ್ಟಕಡೆಗೆ ಬ್ರಿಟಿಷ್ ಏಜೆಂಟ್ ಆಗಿದ್ದ ರಾಜಾ ಜಗನ್ನಾಥ್ ಸಿಂಗ್ ಫೈಝಾಬಾದಿಯನ್ನು ಕೊಂದು, ದೇಹ ಮತ್ತು ತಲೆ ಬೇರೆ ಬೇರೆ ಕಡೆಗಳಲ್ಲಿ ದಫನ ಮಾಡಿದ್ದ. ಫೈಝಾಬಾದಿ ಹುತಾತ್ಮರಾಗಿ ಇಂದಿಗೆ 164 ವರ್ಷಗಳು ಸಂದಿವೆ.

ಬ್ರಿಟೀಷ್ ಅಧಿಕಾರಿಗಳು ಕೂಡಾ ತಮ್ಮ ಗ್ರಂಥಗಳಲ್ಲಿ ಫೈಝಾಬಾದಿ ತೋರಿದ ಧೈರ್ಯ ಮತ್ತು ಸಾಹಸಗಳ ಬಗ್ಗೆ ಬರೆದುಕೊಂಡಿದ್ದಾರೆ. ಆದರೂ ನಮ್ಮ ಶಾಲಾ ಕಾಲೇಜು ಪಠ್ಯಗಳಲ್ಲಿ ಇವರ ಕುರಿತು ಯಾವುದೇ ವಿವರಗಳು ಲಭ್ಯವಿಲ್ಲದಿರುವುದು ದುರಂತ ಎಂದು ಯುದ್ಧಾನುಭವಿ ಮತ್ತು ಮಸೀದಿ ಟ್ರಸ್ಟಿಯೂ ಆಗಿರುವ ಕ್ಯಾಪ್ಟನ್ ಅಫ್ಝಲ್ ಅಹ್ಮದ್ ಖಾನ್ ಹೇಳುತ್ತಾರೆ.

ಅಯೋಧ್ಯೆಯ ಧನ್ನಿಪುರದಲ್ಲಿ ನೂತನವಾಗಿ ಕಟ್ಟಲಾಗುತ್ತಿರುವ ಮಸೀದಿಯಲ್ಲಿ ಏಕಕಾಲಕ್ಕೆ ಎರಡು ಸಾವಿರ ಮಂದಿ ಪ್ರಾರ್ಥನೆ ಸಲ್ಲಿಸಲು ಸಾಧ್ಯವಾಗಲಿದೆ. ಬಾಬರಿ ಮಸೀದಿಗೆ ಬದಲಿಯಾಗಿ ಕಟ್ಟುತ್ತಿದ್ದರೂ, ಮೊಘಲ್ ದೊರೆ ಬಾಬರ್ ಹೆಸರು ಇಡದಂತೆ ಐಐಸಿಎಫ್ ಈ ಮೊದಲೇ ತೀರ್ಮಾನ ಮಾಡಿತ್ತು. ಐಐಸಿಎಫ್ ಟ್ರಸ್ಟ್, ಬಾಬರಿ ಮಸೀದಿಗಾಗಿ ಸುಧೀರ್ಘ ಕಾನೂನು ಹೋರಾಟ ಮಾಡಿದ್ದ ಸುನ್ನಿ ವಕ್ಫ್ ಬೋರ್ಡ್ ನಿಂದ ರಚಿತಗೊಂಡಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು