ಉತ್ತರ ಪ್ರದೇಶದಲ್ಲಿ ಗೋ ಹತ್ಯೆ ನಿಷೇಧ ಕಾನೂನಿನ ದುರುಪಯೋಗವಾಗುತ್ತಿದೆ: ಅಲಹಾಬಾದ್ ಹೈಕೋರ್ಟ್

Share on facebook
Share on twitter
Share on linkedin
Share on whatsapp
Share on telegram
Share on email
Share on print

ಪ್ರಯಾಗ್ರಾಜ್(26-10-2020): ಗೋ ಹತ್ಯೆ ನಿಷೇಧ ಕಾನೂನು ಉತ್ತರ ಪ್ರದೇಶದಲ್ಲಿ ಬಹಳಷ್ಟು ದುರುಪಯೋಗವಾಗುತ್ತಿದೆಯೆಂದು ಅಲಹಾಬಾದ್ ಹೈಕೋರ್ಟ್ ಅಭಿಪ್ರಾಯ ಪಟ್ಟಿದೆ. ಗೋ ಮಾಂಸ ಸಂಗ್ರಹಿಸಿಟ್ಟಿದ್ದಾರೆ ಎಂಬ ಹೆಸರಿನಲ್ಲಿ ಅಮಾಯಕರು ಬಂಧನವಾಗುತ್ತಿದ್ದಾರೆ. ಯಾವ ಮಾಂಸವನ್ನು ಮನೆಯಲ್ಲಿರಿಸಿದರೂ ಅದು ಗೋಮಾಂಸವೆಂಬ ನೆಲೆಯಲ್ಲಿಯೇ ನೋಡಲಾಗುತ್ತಿದೆ ಎಂದು ಹೈಕೋರ್ಟ್ ಬೊಟ್ಟು ಮಾಡಿದೆ.

ಗೋಮಾಂಸ ಹೊಂದಿದ್ದಾನೆಂಬ ಕಾರಣಕ್ಕಾಗಿ ಬಂಧಿತನಾಗಿದ್ದ ರಹೀಮುದ್ದೀನ್ ಎಂಬವರ ಜಾಮೀನು ಅರ್ಜಿಯ ವಿಚಾರಣೆ ಸಮಯದಲ್ಲಿ ಹೈಕೋರ್ಟ್ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ. ಎಫ್ಐಆರ್ ನಲ್ಲಿ ತನ್ನ ಹೆಸರಿಲ್ಲದಿದ್ದರೂ ತಾನು ಒಂದು ತಿಂಗಳಿನಿಂದ ಜೈಲಿಲ್ಲಿದ್ದೇನೆಂದು ರಹೀಮುದ್ದೀನ್ ತನ್ನ ಜಾಮೀನು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆನ್ನಲಾಗಿದೆ.

“ಅಮಾಯಕರನ್ನು ಸಿಲುಕಿಸಿ, ಈ ಕಾನೂನನ್ನು ದುರುಪಯೋಗ ಮಾಡಲಾಗುತ್ತಿದೆ. ಫಾರೆನ್ಸಿಕ್ ಪ್ರಯೋಗಾಲಯಕ್ಕೆ ಕಳುಹಿಸುವ ಮೊದಲೇ ಪೋಲೀಸರು, ತಾವು ವಶಪಡಿಸಿಕೊಂಡ ಮಾಂಸ ಬೀಫ್ ಎಂಬ ತೀರ್ಮಾನಕ್ಕೆ ಬರುತ್ತಾರೆ. ಎಷ್ಟೋ ಪ್ರಕರಣಗಳಲ್ಲಿ ವಶಪಡಿಸಿಕೊಂಡ ಮಾಂಸವನ್ನು ಪರೀಕ್ಷಿಸಲು ಪ್ರಯೋಗಾಲಯಕ್ಕೆ ಕಳುಹಿಸುವುದೇ ಇಲ್ಲ. ಏಳು ವರ್ಷಗಳ ವರೆಗೂ ಶಿಕ್ಷೆ ವಿಧಿಸಲಾಗುವ ಈ ಅಪರಾಧದ ಆರೋಪ ಪಟ್ಟಿಯಲ್ಲಿ ಎಷ್ಟೋ ಮಂದಿಯನ್ನು ವಿನಾ ಕಾರಣ ಸೇರಿಸಲಾಗುತ್ತಿದೆ.” ಎಂದು ಹೈಕೋರ್ಟ್ ಹೇಳಿದೆ.

ವಶಪಡಿಸಿಕೊಂಡ ಗೋವುಗಳು ರಸ್ತೆಗಳಲ್ಲಿ ಅಲೆದಾಡುತ್ತಿದೆ. ಜೊತೆಗೆ ಸಾಕು ಹಸುಗಳನ್ನೂ ರಸ್ತೆಗೆ ಬಿಡಲಾಗುತ್ತಿದೆ. ಇವು ರಸ್ತೆ ಅಪಘಾತಗಳಿಗೆ ಕಾರಣವಾಗುತ್ತಿದೆ. ಪೋಲೀಸರಿಗೂ, ಜನರಿಗೂ ಹೆದರಿ ಬೆಳೆದ ಹಸುಗಳನ್ನು ಬೇರೆ ರಾಜ್ಯಗಳಿಗೆ ಸಾಗಿಸಲೂ ಜನ ಭಯಪಡುತ್ತಿದ್ದಾರೆ ಎಂದೂ ಹೈಕೋರ್ಟ್ ತಿಳಿಸಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು