ಪ್ರೇಮಿಗಳ ದಿನದಂದು ಪತ್ನಿಗೆ ಕಿಡ್ನಿ ನೀಡಿದ ಪತಿ

Share on facebook
Share on twitter
Share on linkedin
Share on whatsapp
Share on telegram
Share on email
Share on print

ನವದೆಹಲಿ(15-02-2021): ಪ್ರೇಮಿಗಳ ದಿನದಂದು ಹೂವುಗಳು, ಚಾಕೊಲೇಟ್‌ಗಳು ಅಥವಾ ದುಬಾರಿ ಉಡುಗೊರೆಗಳನ್ನು ಕೊಡುವುದನ್ನು ನಾವು ನೋಡಿದ್ದೇವೆ ಆದರೆ ಇಲ್ಲೊಬ್ಬ ವ್ಯಕ್ತಿಯು ತನ್ನ ಹೆಂಡತಿಗೆ ಎಂದಿಗೂ ಮರೆಯಲಾಗದ ದುಬಾರಿ ಗಿಫ್ಟನ್ನು ನೀಡಿ ಸುದ್ದಿಯಾಗಿದ್ದಾನೆ.

ಪ್ರೇಮಿಗಳ ದಿನದಂದು ಪ್ರೀತಿಯ ಸಂಕೇತವಾಗಿ, ವ್ಯಕ್ತಿಯೊಬ್ಬರು ತಮ್ಮ 23 ನೇ ವಿವಾಹ ವಾರ್ಷಿಕೋತ್ಸವದಂದು ಅಹಮದಾಬಾದ್‌ನಲ್ಲಿರುವ ತಮ್ಮ ಅನಾರೋಗ್ಯ ಪೀಡಿತ ಹೆಂಡತಿಗೆ ಕಿಡ್ನಿಯನ್ನು ದಾನಮಾಡಿದ್ದಾರೆ.

ವಿನೋದ್ ಪಟೇಲ್ ಅವರು ಪತ್ನಿ ರಿಟಾಬೆನ್ ಪಟೇಲ್ ಅವರಿಗೆ ಈ ದುಬಾರಿ ಗಿಫ್ಟ್ ನ್ನು ನೀಡಿದ್ದಾರೆ. ಮೂತ್ರಪಿಂಡ ಕಾಯಿಲೆಯಿಂದ ರಿಟಾಬೆನ್ ಬಳಲುತ್ತಿದ್ದರು. ಕಳೆದ ಮೂರು ವರ್ಷಗಳಿಂದ ಇದಕ್ಕಾಗಿ ಔಷಧಿಯನ್ನು ತೆಗೆದುಕೊಳ್ಳುತ್ತಿದ್ದರು.

ಮೂತ್ರಪಿಂಡ ದಾನಿಯಾಗಿ ವಿನೋದ್ ಮುಂದೆ ಬಂದಾಗ ಇಬ್ಬರನ್ನೂ ತಪಾಸಣೆ ಮಾಡಿ ಮೂತ್ರಪಿಂಡ ಕಸಿಗೆ ಸೂಕ್ತವೆಂದು ಕಂಡುಬಂದ ಹಿನ್ನೆಲೆಯಲ್ಲಿ ಮುಂದಿನ ಪ್ರಕ್ರಿಯೆ ನಡೆಸಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

 

 

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು