ಕತರ್ ಮೇಲೆ ಹೇರಲಾದ ದಿಗ್ಬಂಧನಗಳನ್ನು ತಕ್ಷಣವೇ ಹಿಂಪಡೆಯಬೇಕು: ಯುಎನ್ ವಿಶೇಷ ವರದಿಗಾರ್ತಿ

Share on facebook
Share on twitter
Share on linkedin
Share on whatsapp
Share on telegram
Share on email
Share on print

ದೋಹಾ-ಕತರ್(14-11-2020): ಕತರ್ ಮೇಲೆ ಹೇರಲಾದ ದಿಗ್ಬಂಧನಗಳನ್ನು ಈ ಕೂಡಲೇ ಹಿಂಪಡೆಯಬೇಕು ಎಂದು ಯುಎನ್ ವಿಶೇಷ ವರದಿಗಾರ್ತಿ ಅಲೇನಾ ದೌಹಾನ್ ಸೌದಿ ಮೈತ್ರಿ ಕೂಟವನ್ನು ಒತ್ತಾಯಿಸಿದ್ದಾರೆ. ನವೆಂಬರ್ ಒಂದರಿಂದ ಹನ್ನೆರಡರ ವರೆಗೆ ಕತರ್ ಕತರ್ ಪ್ರವಾಸದಲ್ಲಿದ್ದ ಅವರು, ಕೊನೆಯ ದಿನದಂದು ಸುದ್ದಿಗೋಷ್ಠಿಯನ್ನು ಮಾತನಾಡುತ್ತಾ ಈ ವಿಚಾರವನ್ನು ಪ್ರಸ್ತಾಪಿಸಿದ್ದಾರೆ.

ಕತರ್ ಪ್ರಜೆಗಳ ವಾಕ್ ಸ್ವಾತಂತ್ರ್ಯ, ಪ್ರಯಾಣ ಬೆಳೆಸುವ ಹಕ್ಕು, ವ್ಯಾಪಾರ ಮಾಡುವ ಹಕ್ಕು, ಆಸ್ತಿಯನ್ನು ಹೊಂದುವ ಹಕ್ಕು ಇತ್ಯಾದಿಗಳನ್ನು ಮೊಟಕುಗೊಳಿಸಿ, ಹೇರಲಾದ ದಿಗ್ಬಂಧನಗಳನ್ನು ಕೂಡಲೇ ಹಿಂದೆಗೆಯಬೇಕೆಂಕು ಒತ್ತಾಯಿಸಿದ ಅವರು, ಯಾವುದೇ ಸರಕಾರದ ಮೇಲೆ ಒತ್ತಡ ತರುವುದಕ್ಕಾಗಿ ಜನಸಾಮಾನ್ಯರ ಹಕ್ಕುಗಳನ್ನು ಘಾಸಿಗೊಳಿಸುವುದು ಸಮಂಜಸವಲ್ಲವೆಂದು ನುಡಿದರು. ತನ್ನ ಪ್ರವಾಸದ ಸಮಯದಲ್ಲಿ ಕತರಿನ ಉನ್ನತ ರಾಜತಾಂತ್ರಿಕರನ್ನು, ಮಾನವ ಹಕ್ಕು ಕಾರ್ಯಕರ್ತರನ್ನು, ಅಂತರರಾಷ್ಟ್ರೀಯ ಸಂಘಟನೆಗಳ ಪ್ರತಿನಿಧಿಗಳನ್ನು ಹಾಗೂ ದಿಗ್ಬಂಧನಗಳ ಕಾರಣದಿಂದ ಸಮಸ್ಯೆಗಳನ್ನು ಅನುಭವಿಸುವವರನ್ನೂ ಭೇಟಿ ಮಾಡಿ ಮಾತುಕತೆ ನಡೆಸಿದರು.

2017ರ ಜೂನ್ ತಿಂಗಳಲ್ಲಿ ಸೌದಿ ಅರೇಬಿಯಾ, ಬಹ್ರೇನ್, ಯುಎಇ ಮತ್ತು ಈಜಿಪ್ಟಿ ದೇಶಗಳು ಸೇರಿ ಕತರ್ ವಿರುದ್ಧ ದಿಬ್ಬಂಧನ ಹೇರಿದ್ದವು. ನೆಲ, ಜಲ, ವಾಯು ಮಾರ್ಗಗಳನ್ನು ತಡೆ ಹಿಡಿದಿದ್ದವು. ದಿಗ್ಬಂಧನಗಳನ್ನು ಹಿಂಪಡೆಯಲು ಇರಾನ್ ಜೊತೆಗಿನ ರಾಜತಾಂತ್ರಿಕ ಸಂಬಂಧಗಳನ್ನು ಕೊನೆಗೊಳಿಸುವುದು, ತುರ್ಕಿ ಜೊತೆಗಿನ ರಕ್ಷಣಾ ಸಹಕಾರವನ್ನು ನಿಲ್ಲಿಸುವುದು, ಅಲ್ ಜಝೀರಾ ಚಾನಲನ್ನು ಬಂದ್ ಮಾಡುವುದು ಮೊದಲಾದ ಶರತ್ತುಗಳನ್ನು ವಿಧಿಸಿದ್ದವು.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು