ಇಂದಿನಿಂದ ಉಮ್ರಾ ಯಾತ್ರೆ ಪುನರಾರಂಭ: ಹೇಗಿದೆ ಮುಂಜಾಗೃತಾ ಕ್ರಮ?

umrah
Share on facebook
Share on twitter
Share on linkedin
Share on whatsapp
Share on telegram
Share on email
Share on print

ಗಲ್ಫ್ ನ್ಯೂಸ್ (04-10-2020): ಕೊರೋನಾ ಕಾರಣದಿಂದ ಸುಮಾರು ಏಳು ತಿಂಗಳ ಕಾಲ ಪವಿತ್ರ ಉಮ್ರಾ ಯಾತ್ರೆಯು ನಿಂತು ಹೋಗಿತ್ತು. ಇದೀಗ ಸೌದಿಯಲ್ಲಿ ಕೊರೋನಾ ಪೀಡಿತರ ಸಂಖ್ಯೆಯಲ್ಲಿ ಗಣನೀಯ ಇಳಿಕೆ ಕಂಡು ಬಂದ ಹಿನ್ನೆಲೆಯಲ್ಲಿ ಉಮ್ರಾ ಯಾತ್ರೆಯು ಪುನರಾರಂಭವಾಗಲಿದ್ದು, ತೀವ್ರವಾದ ಆರೋಗ್ಯ ಮುಂಜಾಗ್ರತಾ ಕ್ರಮಗಳಿಗೆ ಹರಮ್ ಸಾಕ್ಷಿಯಾಗಿದೆ.

ಹರಮಿನ ಪ್ರವೇಶ ದ್ವಾರದಲ್ಲೇ ಸ್ಯಾನಿಟೈಸರುಗಳು ಮತ್ತು ಥರ್ಮಲ್ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಶೌಚಾಲಯ, ಗಾಲಿಕುರ್ಚಿ, ಎಸ್ಕಲೇಟರುಗಳನ್ನು ವೈರಸ್ ನಾಶಕಗಳಿಂದ ಸ್ವಚ್ಛಗೊಳಿಸಲಾಗುತ್ತಿದೆ. ಹವಾನಿಯಂತ್ರಿಕಗಳನ್ನು ಆಲ್ಟ್ರಾವಯಲೆಟ್ ಕಿರಣಗಳನ್ನು ಹಾಯಿಸಿ ಸ್ವಚ್ಛಗೊಳಿಸಲಾಗುತ್ತಿದೆ. ಪ್ರತಿಯೊಂದು ಹಜ್ ತಂಡವು ಹರಮಿಗೆ ಪ್ರವೇಶಿಸುವ ಮೊದಲೂ, ಬಳಿಕವೂ ಎಲ್ಲೆಡೆಯೂ ಈ ರೀತಿ ಸ್ವಚ್ಛಗೊಳಿಸಲಾಗುತ್ತದೆ.

ಪ್ರತಿಯೊಂದು ಉಮ್ರಾ ಯಾತ್ರಿಕರ ತಂಡವನ್ನು ಆರೋಗ್ಯ ಕಾರ್ಯಕರ್ತರು ಮುನ್ನಡೆಸುವಂತೆ ವ್ಯವಸ್ಥೆ ಮಾಡಲಾಗಿದ್ದು, ಯಾರಿಗಾದರೂ ರೋಗ ಲಕ್ಷಣ ಕಂಡು ಬಂದ ತಕ್ಷಣವೇ ಅವರನ್ನು ಪ್ರತ್ಯೇಕ ಕೇಂದ್ರಕ್ಕೆ ಸಾಗಿಸಿ, ನಿಗಾ ವಹಿಸಲಾಗುತ್ತದೆ. ಯಾತ್ರಿಕರನ್ನು ಒಯ್ಯುವ ಬಸ್ಸುಗಳನ್ನೂ ದೈಹಿಕ ಅಂತರ ಕಾಯ್ದುಕೊಳ್ಳುವಂತೆ ವ್ಯವಸ್ಥೆಗೊಳಿಸಲಾಗಿದೆ ಹಾಗೂ ಬಸ್ಸುಗಳಲ್ಲಿ ಮಾಸ್ಕ್ ಮತ್ತು ಸೆನಿಟೈಝರುಗಳು ಸದಾ ಲಭ್ಯವಿದೆ.

ಹಂತಹಂತವಾಗಿ ಉಮ್ರಾ ನಿರ್ವಹಣೆಯ ಮೇಲಿನ ನಿರ್ಬಂಧಗಳನ್ನು ಸಡಿಲಿಸಲಾಗುತ್ತಿದೆ. ಇಂದಿನಿಂದ ಮೂವತ್ತು ಶೇಕಡಾ ಮಂದಿಗೆ ಅಂದರೆ ಆರು ಸಾವಿರ ಮಂದಿಗಷ್ಟೇ ಅವಕಾಶವಿದ್ದು, ಇವರೆಲ್ಲರೂ ಸೌದಿ ಪ್ರಜೆಗಳೋ ಅಥವಾ ಈ ಮೊದಲೇ ಸೌದಿಯಲ್ಲಿ ನೆಲೆಸಿದ ವಿದೇಶಿಗಳೋ ಆಗಿದ್ದಾರೆ. ಈ ತಿಂಗಳ ಹದಿನೆಂಟರ ಬಳಿಕ ಪ್ರತಿದಿನ ಹದಿನೈದು ಸಾವಿರ ಮಂದಿಗೆ ಉಮ್ರಾಗೆ ಅವಕಾಶ ನೀಡಲಾಗುತ್ತೆ. ಆ ವೇಳೆಯಲ್ಲಿ ನಲವತ್ತು ಸಾವಿರ ಮಂದಿಗೆ ಉಮ್ರೇತರ ಆರಾಧನೆಗಳಾದ ನಮಾಜ್ ಇನ್ನಿತರ ಕರ್ಮಗಳನ್ನು ಮಾಡುವ ಅವಕಾಶವಿದೆ.

ನವೆಂಬರ್ ಒಂದರಿಂದ ವಿದೇಶಿಗಳಿಗೂ ಉಮ್ರಾ ಮಾಡಲು ಅವಕಾಶ ನೀಡಲಾಗುತ್ತೆ. ಆದರೆ ಆಗಲೂ ಇಪ್ಪತ್ತು ಸಾವಿರ ಮಂದಿಗಷ್ಟೇ ಅವಕಾಶವಿರುವುದು ಮತ್ತು ಅರುವತ್ತು ಸಾವಿರ ಮಂದಿಗೆ ಉಮ್ರೇತರ ಆರಾಧನೆಗಳಿಗಾಗಿ ಹರಮ್ ಪ್ರವೇಶಿಸಬಹುದು. ಈವರೆಗೂ ಒಟ್ಟು ಒಂದು ಲಕ್ಷದ ಹತ್ತು ಸಾವಿರ ಮಂದಿ ಉಮ್ರಾ ಯಾತ್ರೆಗಾಗಿ ಹೆಸರು ನೋಂದಾಯಿಸಿದ್ದಾರೆ. ಅದರಲ್ಲಿ ಅರುವತ್ತೈದು ಸಾವಿರಕ್ಕೂ ಹೆಚ್ಚು ಮಂದಿ ವಿದೇಶಿಯರು. ದೇಶವು ಸಂಪೂರ್ಣವಾಗಿ ಕೊರೋನಾ ಮುಕ್ತವಾಗುವವರೆಗೂ ಕೊರೋನಾ ಪೂರ್ವ ರೀತಿಯಂತೆ ಎಲ್ಲರಿಗೂ ಉಮ್ರಾ ನಿರ್ವಹಿಸಲು ಅವಕಾಶವಿರುವುದಿಲ್ಲವೆಂದು ಹಜ್ ಸಚಿವಾಲಯವು ಈಗಾಗಲೇ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು