ನವದೆಹಲಿ(05-10-2020): ಈಶಾನ್ಯ ದೆಹಲಿಯಲ್ಲಿ ನಡೆದ ಕೋಮು ಹಿಂಸಾಚಾರಕ್ಕೆ ಸಂಬಂಧಿಸಿದಂತೆ 14 ದಿನಗಳ ನ್ಯಾಯಾಂಗ ಕಸ್ಟಡಿಗೆ ಕಳುಹಿಸಿದ ನಂತರ ಜೈಲಿನ ಆವರಣದಲ್ಲಿ ಮಾಜಿ ಜೆಎನ್ಯು ವಿದ್ಯಾರ್ಥಿ ಉಮರ್ ಖಾಲಿದ್ ಅವರಿಗೆ ಭದ್ರತೆ ಒದಗಿಸುವಂತೆ ದೆಹಲಿ ನ್ಯಾಯಾಲಯವು ತಿಹಾರ್ ಜೈಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ.
ಖಾಲಿದ್ ಅವರನ್ನು ದೆಹಲಿ ಪೊಲೀಸರ ಅಪರಾಧ ವಿಭಾಗ ಅಕ್ಟೋಬರ್ 1 ರಂದು ಬಂಧಿಸಿ ಮೂರು ದಿನಗಳ ಪೊಲೀಸ್ ಕಸ್ಟಡಿಗೆ ಕಳುಹಿಸಿತ್ತು. ಅಕ್ಟೋಬರ್ 4 ರಂದು ಅವರ ಪೊಲೀಸ್ ಕಸ್ಟಡಿ ಕೊನೆಗೊಂಡಿತು, ನಂತರ ಅವರನ್ನು ತಿಹಾರ್ ಜೈಲಿನಲ್ಲಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಯಿತು.
ಅವರ ವಕೀಲರಾದ ಸನ್ಯಾ ಕುಮಾರ್ ಮತ್ತು ರಕ್ಷಾಂಡಾ ಅವರು ತಮ್ಮ ಕ್ಲೈಂಟ್ಗೆ ಭದ್ರತೆ, ಕನ್ನಡಕ ಧರಿಸಲು ಅನುಮತಿ, ಪುಸ್ತಕಗಳ ಲಭ್ಯತೆ ಮತ್ತು ಓದುವ ಸಾಮಗ್ರಿಗಳನ್ನು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಇದಕ್ಕೆ ನ್ಯಾಯಾಲಯ ಒಪ್ಪಿಗೆ ನೀಡಿ ಆದೇಶಿಸಿದೆ.
ಈ ಕುರಿತು, ತಿಹಾರ್ ನ್ಯಾಯಾಲಯದ ಸಂಕೀರ್ಣದ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ದೇವ್ ಸರೋಹಾ, ಭದ್ರತೆ ಮತ್ತು ಅವಶ್ಯಕ ಸೌಲಭ್ಯ ಒದಗಿಸುವಂತೆ ಸೂಚಿಸಿದ್ದಾರೆ.