ಬೆಳ್ತಂಗಡಿ(18-12-2020): ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ಉಜಿರೆಯಲ್ಲಿ ಉದ್ಯಮಿಯೋರ್ವರ 8 ವರ್ಷದ ಮಗನನ್ನು ಅಪಹರಣ ಮಾಡಲಾಗಿದೆ. ಕರಾವಳಿಯಲ್ಲಿ ಮಕ್ಕಳ ಕಳ್ಳರಿದ್ದಾರೆ ಎಂಬ ಊಹಾಪೋಹದ ಮಧ್ಯೆ ಈ ಸುದ್ದಿ ಪೋಷಕರಲ್ಲಿ ಮತ್ತಷ್ಟು ಭೀತಿಯನ್ನುಂಟುಮಾಡಿದೆ.
ಬಿಜೋಯಿ ಏಜೆನ್ಸಿ ಮಾಲಕ ಬಿಜೋಯ್ ಅವರ ಪುತ್ರ ಅನುಭವ್ ನನ್ನು ನಿನ್ನೆ ಮನೆಯ ಬಳಿ ಆಟವಾಡುತ್ತಿದ್ದಾಗ ಕಾರಿನಲ್ಲಿ ಬಂದ ತಂಡ ಅಪಹರಣ ಮಾಡಿದೆ.
ಅಪಹರಣ ಮಾಡಿದ ತಂಡ 17 ಕೋಟಿ ರೂ. ನೀಡುವಂತೆ ಬೇಡಿಕೆ ಇಟ್ಟಿದೆ ಎಂದು ಬಾಲಕನ ಕುಟುಂಬಸ್ಥರು ತಿಳಿಸಿದ್ದಾರೆ. ಈ ಕುರಿತು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.