ಉಡುಪಿ (01-12-2020): ಉಡುಪಿ ಕೃಷ್ಣಮಠದಲ್ಲಿ ಬೋರ್ಡ್ ವಿವಾದ ಭುಗಿಲೆದ್ದಿದ್ದು, ಕನ್ನಡಪರ ಹೋರಾಟಗಾರರು ಮಠದ ಆಡಳಿತದ ವಿರುದ್ಧ ಕಿಡಿಕಾರಿದ್ದಾರೆ.
ಕೃಷ್ಣಮಠದಲ್ಲಿ ಈ ಹಿಂದೆ ಕನ್ನಡದಲ್ಲಿ ಬೋರ್ಡ್ ಬರೆಯಲಾಗಿತ್ತು. ಆದರೆ ಈಗ ತುಳುವಿನಲ್ಲಿ ಮತ್ತು ಸಂಸ್ಕೃತದಲ್ಲಿ ನಾಮಫಲಕವನ್ನು ಹಾಕಲಾಗಿದೆ. ಇದರಿಂದಾಗಿ ವಿವಾದ ಉಂಟಾಗಿದೆ.
ಶ್ರೀಕೃಷ್ಣ ಮಠ, ರಜತಪೀಠ ಪುರಂ ಎಂದಿರುವ ಹೊಸ ಫಲಕದಲ್ಲಿ ಸಂಸ್ಕೃತ ಮತ್ತು ತುಳು ಪದಗಳನ್ನು ಬಳಕೆ ಮಾಡಲಾಗಿದೆ.
ವಿವಾದದ ನಾಮಫಲಕಕ್ಕೆ ಸಂಬಂಧಪಟ್ಟಂತೆ ಮಠದಿಂದ ಸ್ಪಷ್ಟನೆ ಹೊರಬಂದಿದ್ದು, ಕೃಷ್ಣ ಮಠದಲ್ಲಿ ಕೆಲಸ ನಡೆಯುತ್ತಿದೆ. ಇದರಿಂದಾಗಿ ಮಖ್ಯದ್ವಾರದ ಪ್ಲಾಸ್ಟಿಕ್ ಬೋರ್ಡ್ ತೆಗೆಯಲಾಗಿದೆ. ದ್ವಾರದ ಮೇಲ್ಭಾಗದಲ್ಲಿ ಕನ್ನಡ ಫಲಕವನ್ನು ಅಳವಡಿಸುತ್ತೇವೆ ಎಂದು ಹೇಳಿದ್ದಾರೆ.