ಮುಂಬೈ(14/11/2020): ಸೋಮವಾರದಿಂದ ಮಹಾರಾಷ್ಟ್ರದಲ್ಲಿ ದೇವಸ್ಥಾನ, ಮಸೀದಿ, ಚರ್ಚ್ ಹಾಗೂ ಇನ್ನಿತರ ದೇವಾಲಯಗಳು ತೆರೆಯಲಿವೆ ಎಂದು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹೇಳಿದ್ದಾರೆ.
ಮಹಾರಾಷ್ಟ್ರದ ಜನತೆಗೆ ದೀಪಾವಳಿ ಶುಭಾಶಯ ಕೋರುತ್ತಾ ಅವರು ಮಾತನಾಡುತ್ತಿದ್ದರು. ಮಹಾಮಾರಿ ಕೊರೋನಾ ವೈರಸ್ನ ಅಟ್ಟಹಾಸ ಕಡಿಮೆಯಾಗುತ್ತಿದ್ದರೂ, ಸಂಪೂರ್ಣವಾಗಿ ಅಳಿದಿಲ್ಲ. ಅದ್ದರಿಂದ ಎಲ್ಲರೂ ಕೊರೋನಾ ಜಾಗೃತಿಗಳನ್ನು ಪಾಲಿಸಿಕೊಂಡೇ ಪೂಜಾ ಸ್ಥಳಗಳಿಗೆ ಹೋಗಬೇಕು ಎಂದು ಮನವಿ ಮಾಡಿದ್ದಾರೆ.
ಇದೇ ವೇಳೆ ಅವರು, ಕೊರೊನಾ ಸಂದರ್ಭದಲ್ಲಿ ಜೀವದ ಹಂಗು ತೊರೆದು ನಾಗರಿಕರ ಸೇವೆ ಮಾಡಿದ ವೈದ್ಯರು, ನರ್ಸ್ ಗಳು ಹಾಗೂ ಆರೋಗ್ಯ ಸಿಬ್ಬಂದಿಗಳಿಗೆ ಧನ್ಯವಾದ ಹೇಳಿದರು.