ಉಚಿತ ಲಸಿಕೆ ನೀಡಲು ರಾಜಸ್ಥಾನ, ಪಂಜಾಬ್ ಮತ್ತು ಮಹಾರಾಷ್ಟ್ರ ರಾಜ್ಯಗಳ ನಿರ್ಧಾರ | ಈಗಾಗಲೇ ಉಚಿತ ಲಸಿಕೆ ಘೋಷಿಸಿದ ರಾಜ್ಯಗಳು ಇಲ್ಲಿವೆ..

Share on facebook
Share on twitter
Share on linkedin
Share on whatsapp
Share on telegram
Share on email
Share on print

ನವದೆಹಲಿ: ಹದಿನೆಂಟರಿಂದ ನಲ್ವತ್ತೈದು ವರ್ಷ ವಯಸ್ಸಿನವರಿಗೆ ಉಚಿತವಾಗಿ ಲಸಿಕೆ ನೀಡಲು ರಾಜಸ್ಥಾನ, ಪಂಜಾಬ್ ಮತ್ತು ಮಹಾರಾಷ್ಟ್ರ ರಾಜ್ಯಗಳು ನಿರ್ಧರಿಸಿದೆ. ಈಗಾಗಲೇ ಹಲವು ರಾಜ್ಯಗಳು ಉಚಿತ ಲಸಿಕೆ ನೀಡುವುದೆಂದು ಘೋಷಣೆ ಮಾಡಿದ್ದು, ಅವುಗಳ ಸಾಲಿಗೆ ಮೂರು ರಾಜ್ಯಗಳು ಸೇರಿದಂತಾಗಿದೆ.

ರಾಜ್ಯದ ಪ್ರಜೆಗಳಿಗೆ ಉಚಿತ ಲಸಿಕೆ ನೀಡಲು ತೀರ್ಮಾನಿಸಿದ ಇತರ ರಾಜ್ಯಗಳೆಂದರೆ, ಮಧ್ಯಪ್ರದೇಶ, ಜಮ್ಮುಕಾಶ್ಮೀರ, ಹಿಮಾಚಲ ಪ್ರದೇಶ, ಗೋವಾ, ಕೇರಳ, ಚತ್ತೀಸ್‍ಘಡ, ಬಿಹಾರ, ಜಾರ್ಖಂಡ್, ಉತ್ತರಪ್ರದೇಶ, ಅಸ್ಸಾಮ್, ಸಿಕ್ಕಿಂ, ಪಶ್ಚಿಮಬಂಗಾಳ, ತಮಿಳುನಾಡು, ಆಂಧ್ರ ಪ್ರದೇಶ, ತೆಲಂಗಾಣ ಮತ್ತು ಹರ್ಯಾಣ.

ರಾಜಸ್ಥಾನ ಸಿಎಂ ಮಾತನಾಡಿ, ಉಚಿತ ಲಸಿಕೆ ನೀಡಲು ನಾವು ಈಗಾಗಲೇ ಮೂರು ಸಾವಿರ ಕೋಟಿ ರೂಪಾಯಿಗಳನ್ನು ಮೀಸಲಾಗಿರಿಸಿದ್ದೇವೆ. ಆದರೂ ಹಲವು ರಾಜ್ಯಗಳ ಬೇಡಿಕೆಯಂತೆ ಕೇಂದ್ರ ಸರಕಾರವೇ ಲಸಿಕೆಯ ವೆಚ್ಚವನ್ನು ಭರಿಸುವುದು ಸೂಕ್ತ ಎಂದಿದ್ದಾರೆ.

ಈಗಾಗಲೇ ಟೆಂಡರ್‌ಗಳನ್ನು ಕರೆಯಲಾಗಿದೆ. ಜನರಿಗೆ ವಿತರಿಸಲು ಲಸಿಕೆಗಳನ್ನು ಶೀಘ್ರವೇ ಖರೀದಿಸಲಾಗುವುದು ಎಂದು ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಹೇಳಿದ್ದಾರೆ.

ಉಚಿತ ಲಸಿಕೆಗೆ ಬೇಕಾಗುವ ಹಣವನ್ನು ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ವಿನಿಯೋಗಿಸಲಾಗುವುದು. 30 ಲಕ್ಷ ಡೋಸ್‌ ಲಸಿಕೆಯನ್ನು ಖರೀದಿಸಲು ಆರೋಗ್ಯ ಇಲಾಖೆಗೆ ಸೂಚಿಸಲಾಗಿದೆ ಎಂದು ಪಂಜಾಬ್‌ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಪ್ರಕಟಿಸಿದ್ದಾರೆ.

ಉಚಿತ ಲಸಿಕೆ ನೀಡುವ ಬಗ್ಗೆ ಕರ್ನಾಟಕ ಸರಕಾರದಿಂದ ಯಾವುದೇ ಆದೇಶ ಬಂದಿಲ್ಲ. ಆದರೂ ಲಸಿಕೆಯನ್ನು ಉಚಿತವಾಗಿ ವಿತರಿಸುವಂತೆ ಸಾರ್ವಜನಿಕರಿಂದ ವ್ಯಾಪಕ ಆಗ್ರಹಗಳು ಕೇಳಿ ಬರುತ್ತಿವೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು