ಹತ್ರಾಸ್ ಮಾರ್ಗ ಮಧ್ಯೆ ಬಂಧಿತ ಪತ್ರಕರ್ತ ಸೇರಿದಂತೆ CFI ನಾಯಕರ ಮೇಲೆ UAPA, ದೇಶದ್ರೋಹದಡಿ ಪ್ರಕರಣ ದಾಖಲು|

pfi
Share on facebook
Share on twitter
Share on linkedin
Share on whatsapp
Share on telegram
Share on email
Share on print

ಲಖನೌ (07-10-2020): ಹತ್ರಾಸ್‌ಗೆ ತೆರಳುತ್ತಿದ್ದಾಗ ಉತ್ತರ ಪ್ರದೇಶದ ಪೊಲೀಸರು ಬಂಧಿಸಿರುವ ಕೇರಳದ ಪತ್ರಕರ್ತ ಮತ್ತು ಇತರ ಮೂವರು ಸಿಎಫ್ ಐ ನಾಯಕರ ಮೇಲೆ ಉತ್ತರ ಪ್ರದೇಶ ಪೊಲೀಸರು ದೇಶದ್ರೋಹ, ಯುಎಪಿಎಯಡಿ ಪ್ರಕರಣವನ್ನು ದಾಖಲಿಸಿರುವ ಅಚ್ಚರಿಯ ಘಟನೆ ವರದಿಯಾಗಿದೆ.

ಪೊಲೀಸರು ಯುಎಪಿಎಯ ಸೆಕ್ಷನ್ 17 ನ್ನು ದಾಖಲಿಸಿದ್ದಾರೆ. ಇದು “ಭಯೋತ್ಪಾದಕ ಕೃತ್ಯಕ್ಕಾಗಿ ಹಣವನ್ನು ಸಂಗ್ರಹಿಸುವುದನ್ನು ಹೇಳುತ್ತದೆ.

ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಗಿರುವ ಪರಿಶಿಷ್ಟ ಜಾತಿಯ 20 ವರ್ಷದ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಹಿನ್ನೆಲೆಯಲ್ಲಿ ಪತ್ರಕರ್ತ ಸಿದ್ದೀಕ್ ಕಪ್ಪನ್ ಮೂವರ ಜೊತೆ ಸೋಮವಾರ ಹತ್ರಾಸ್‌ಗೆ ತೆರಳಿದ್ದರು.

 ಕೇರಳ ಮೂಲದ ಜನಪ್ರಿಯ ವೆಬ್‌ಸೈಟ್‌ನ ಕೊಡುಗೆದಾರರಾದ ಶ್ರೀ ಕಪ್ಪನ್ ಅವರು ಕೇರಳ ಯೂನಿಯನ್ ಆಫ್ ವರ್ಕಿಂಗ್ ಜರ್ನಲಿಸ್ಟ್ಗಳ ದೆಹಲಿ ಘಟಕದ ಕಾರ್ಯದರ್ಶಿಯೂ ಆಗಿದ್ದಾರೆ.

ನಿನ್ನೆ ಸಿದ್ದೀಕ್ ಕಪ್ಪನ್, ಅತೀಕ್-ಉರ್ ರೆಹಮಾನ್, ಮಸೂದ್ ಅಹ್ಮದ್ ಮತ್ತು ಆಲಂ ಎಂಬ ಮೂವರನ್ನು ಮಥುರಾದ ಟೋಲ್ ಗೇಟ್‌ನಲ್ಲಿ ಅನುಮಾನಾಸ್ಪದ ವ್ಯಕ್ತಿಗಳೆಂದು ಯುಪಿ ಪೊಲೀಸರು ಬಂಧಿಸಿದ್ದರು. ಬಂಧನವನ್ನು ಕಾನೂನುಬಾಹಿರ ಎಂದು ಪಿಎಫ್ ಐ ಹೇಳಿತ್ತು.

 

 

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು