ಯುಎಇ(06-10-2020): ಕೊರೋನಾ ಸಮಯದಲ್ಲಿ ವೀಸಾ ಮುಗಿದಿದ್ದರೂ ಯುಎಇಯಲ್ಲಿ ತಂಗಿರುವವರು ಈ ತಿಂಗಳ ಹನ್ನೊಂದನೆಯ ತಾರೀಕಿಗೆ ಮೊದಲು ಊರಿಗೆ ಹಿಂದಿರುಗಬೇಕು. ತಪ್ಪಿದಲ್ಲಿ ಮುಂದಿನ ಪ್ರತಿಯೊಂದು ದಿನದ ಲೆಕ್ಕದಲ್ಲಿ ದಂಡ ಕಟ್ಟಬೇಕಾಗಿ ಬರಬಹುದೆಂದು ಇಮಿಗ್ರೇಷನ್ ಪ್ರಕಟನೆಗಳು ತಿಳಿಸಿವೆ.
ಈ ವರ್ಷದ ಮಾ.1 ಮತ್ತು ಜುಲೈ ಹನ್ನೆರಡರಂದು ರೆಸಿಡೆನ್ಸ್ ವೀಸಾ ಮುಗಿದುಹೋದವರಿಗೆ ಈ ತಿಂಗಳು ಹನ್ನೊಂದನೆಯ ತಾರೀಕಿನೊಳಗೆ ಹಿಂದಿರುಗಬೇಕಿದೆ. ಇಲ್ಲದಿದ್ದರೆ ಹಳೆಯ ವೀಸಾದಿಂದ ಹೊಸ ವೀಸಾಗೆ ಪಲ್ಲಟಗೊಳ್ಳಬೇಕು. ವಿಸಿಟ್ ವೀಸಾ ಹೊಂದಿರುವವರು ಹಿಂದಿರುಗುವ ಸಮಯ ಕಳೆದ ತಿಂಗಳು ಮುಗಿದು ಹೋಗಿತ್ತು. ಸದ್ಯ ವಿಸಿಟ್ ವೀಸಾ ಹೊಂದಿರುವವರು ದಂಡ ಕಟ್ಟಿ ಹಿಂದಿರುಗುತ್ತಿದ್ದಾರೆ.
ಸೂಕ್ತ ಕಾರಣಗಳಿಂದಾಗಿ ಹಿಂದಿರುಗಲು ಸಾಧ್ಯವಾಗದೇ ಇದ್ದರೆ ಅಂಥವರಿಗೆ ಮಾನವೀಯ ನೆಲೆಯಲ್ಲಿ ದಂಡದಿಂದ ವಿನಾಯಿತಿ ಸಿಗುವ ಸಾಧ್ಯತೆಯಿದೆ. ಆದರೆ ಅದಕ್ಕಾಗಿ GCRFA ಮತ್ತು ICA ಅಧಿಕಾರಿಗಳನ್ನು ಸಂಪರ್ಕಿಸಿ, ಸೂಕ್ತ ಕಾರಣಗಳನ್ನು ಕೊಟ್ಟು, ಅವರಿಗೆ ಮನದಟ್ಟು ಮಾಡಬೇಕಿದೆ. ಅವರಿಗದು ಸೂಕ್ತವೆಂದು ಕಂಡು ಬಂದರೆ ಮಾತ್ರವೇ ಈ ವಿನಾಯಿತಿ ಲಭ್ಯ.
ಈ ತಿಂಗಳ ಹನ್ನೊಂದರ ಬಳಿಕ ಹಿಂದಿರುಗದಿದ್ದರೆ, ಪ್ರತಿದಿನಕ್ಕೆ ಇಪ್ಪತ್ತೈದು ದಿರ್ಹಮಿನಂತೆ ದಂಡ ಕಟ್ಟಬೇಕಾಗುತ್ತೆ. ಆರು ತಿಂಗಳ ಬಳಿಕ ಅದು ಐವತ್ತು ದಿರ್ಹಮಿಗೆ ಏರಿಕೆಯಾಗುತ್ತದೆ.