ಯುಎಇ: ವಾಟ್ಸಪ್ ಮೂಲಕ ಅಸಭ್ಯ ವಾಯ್ಸ್ ಕಳುಹಿಸಿದಾತನಿಗೆ ದಂಡ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಅಲ್ಐನ್: ವಾಟ್ಸಪ್ ಮೂಲಕ ಅಸಭ್ಯ ಧ್ವನಿ ಸಂದೇಶ ಕಳುಹಿಸಿದಾತನಿಗೆ ಯುಎಇ ಯಲ್ಲಿ ದಂಡ ಬಿದ್ದಿದೆ.

ವಾಟ್ಸಪ್ ಮೂಲಕ ತನ್ನನ್ನು ಮತ್ತು ತನ್ನ ಹೆತ್ತವರ ವಿರುದ್ಧ ಅಸಭ್ಯ ಧ್ವನಿ ಸಂದೇಶವನ್ನು ಕಳುಹಿಸಿದಾತನ ವಿರುದ್ಧ ಸಂತ್ರಸ್ತನು ಯುಎಇಯ ಪ್ರಾಥಮಿಕ ನ್ಯಾಯಾಲಯದ ಮೆಟ್ಟಿಲೇರಿದ್ದನು. ಸಂತ್ರಸ್ತನು ಹಾಜರುಪಡಿಸಿದ ಸಾಕ್ಷಿಯ ಆಧಾರದಲ್ಲಿ, ಆರೋಪಿಯ ಅಪರಾಧವು ನ್ಯಾಯಾಲಯದಲ್ಲಿ ಸಾಬೀತಾಗಿತ್ತು. ವಿಚಾರಣೆಯ ಬಳಿಕ ನ್ಯಾಯಾಲಯವು ಅಪರಾಧಿಗೆ 10,000 ದಿರ್ಹಮ್ ದಂಡ ವಿಧಿಸಿ, ತೀರ್ಪನ್ನೂ ನೀಡಿತ್ತು.

ಆದರೆ ಅಷ್ಟಕ್ಕೆ ಸಮಾಧಾನಪಡದ ಸಂತ್ರಸ್ತ, ಹೆಚ್ಚಿನ ಮಾನನಷ್ಟ ಪರಿಹಾರಕ್ಕೆ ಆಗ್ರಹಿಸಿ, ಮೇಲ್ಮನವಿ ನ್ಯಾಯಾಲಯದ ಮೊರೆ ಹೋಗಿದ್ದನು. ದಂಡದ ಮೊತ್ತವನ್ನು ಹೆಚ್ಚು ಮಾಡದೇ, ಕೆಳ ನ್ಯಾಯಾಲಯದ ತೀರ್ಪನ್ನು, ಮೇಲ್ಮನವಿ ನ್ಯಾಯಾಲಯವು ಇದೀಗ ಎತ್ತಿ ಹಿಡಿದಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು