ಯುಎಇ: ಇತರರ ಸಾಮಗ್ರಿಗಳನ್ನು ತಮ್ಮೊಂದಿಗೆ ತರುವ ಪ್ರಯಾಣಿಕರಿಗೆ ಕಠಿಣ ಎಚ್ಚರಿಕೆ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಅಬುದಾಬಿ: ಯುಎಇಗೆ ಬರುವ ಪ್ರಯಾಣಿಕರು ಇತರರ ಸಾಮಗ್ರಿಗಳನ್ನು ತಮ್ಮೊಂದಿಗೆ ತರುವ ವಿಚಾರವಾಗಿ ಯುಎಇ ಕಸ್ಟಮ್ಸ್ ಪ್ರಾಧಿಕಾರವು ಕಠಿಣ ಎಚ್ಚರಿಕೆಯನ್ನು ನೀಡಿದೆ.

ಇತರರ ಸಾಮಗ್ರಿಗಳನ್ನು ಕೂಲಂಕುಷವಾಗಿ ಪರಿಶೀಲನೆ ನಡೆಸಿದ ಬಳಿಕವೇ ತಮ್ಮೊಂದಿಗೆ ತರಬೇಕೆಂದು ಅದು ತಿಳಿಸಿದೆ. ಕೇವಲ ನಂಬಿಕೆಯ ಆಧಾರದಲ್ಲಿ ಬಂಧು ಮಿತ್ರಾದಿಗಳ ಸಾಮಾನು ಸರಂಜಾಮುಗಳನ್ನು ತರಬಾರದೆಂದು ನಿರ್ದೇಶಿಸಿದೆ.

ಇನ್ನು ಅಪರಿಚಿತರ ಸಾಮಗ್ರಿಗಳಾಗಿದ್ದರೆ, ಗರಿಷ್ಠ ಎಚ್ಚರಿಕೆ ವಹಿಸಿಬೇಕಲ್ಲದೇ, ಸೂಕ್ಷ್ಮವಾಗಿ ಅವುಗಳನ್ನು ಪರಿಶೋಧನೆಗೊಳಪಡಿಸಬೇಕು. ಮೂಲಕ ಸುಗಮ ಮತ್ತು ಸುರಕ್ಷಿತ ಪ್ರಯಾಣಕ್ಕೆ ಆದ್ಯತೆ ನೀಡಬೇಕೆಂದು ಸಲಹೆ ನೀಡಿದೆ.

ಇತರ ದೇಶಗಳಲ್ಲಿ ಅನುಮತಿಯಿದ್ದರೂ, ಯುಎಇಗೆ ತರಲು ಅನುಮತಿಯಿರದ ಹಲವು ವಸ್ತುಗಳಿವೆ. ಅಂಥವುಗಳನ್ನು ತಂದರೆ ಕಾನೂನು ಕ್ರಮ ಎದುರಿಸಬೇಕಾಗಬಹುದೆಂದು ಕಸ್ಟಮ್ಸ್ ಪ್ರಾಧಿಕಾರವು ಮುನ್ನೆಚ್ವರಿಕೆ ನೀಡಿದೆ.

ಮಾದಕ ದ್ರವ್ಯಗಳು, ಜೂಜಾಟದಲ್ಲಿ ಬಳಸಲಾಗುವ ಉಪಕರಣಗಳು, ಮೀನುಗಾರಿಕೆಗೆ ಬಳಸುವ ನೈಲಾನ್ ಬಲೆಗಳು, ಎಲ್ಲಾ ಪ್ರಬೇಧಗಳ ಹಂದಿಗಳು, ಆನೆ ದಂತ, ಲೇಸರ್ ಪೆನ್ನು, ನಕಲಿ ನೋಟುಗಳು, ಪರಮಾಣು ವಿಕಿರಣಕ್ಕೆ ಸಂಬಂಧಿಸಿದ ವಸ್ತುಗಳು ಮತ್ತು ಅವುಗಳಿಗೆ ಸಂಬಂಧಿಸಿದ ಪುಸ್ತಕಗಳು, ಚಿತ್ರಗಳು, ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಬರಹ ಮತ್ತು ಚಿತ್ರಗಳು, ಬಾಯಲ್ಲಿ ಅಗಿಯುವ ಅಮಲು ಪದಾರ್ಥಗಳು ಇತ್ಯಾದಿಗಳನ್ನು ಯುಎಇಗೆ ತರುವುದನ್ನು ನಿಷೇಧಿಸಲಾಗಿದೆ.

ಇದಲ್ಲದೇ ಹಲವು ವಸ್ತುಗಳನ್ನು ತರುವುದಕ್ಕೆ ಪ್ರತ್ಯೇಕ ಅನುಮತಿಯ ಅಗತ್ಯವಿದೆ. ಔಷಧಿಗಳನ್ನು ತರುವವರು, ಅದರ ಜೊತೆಗೆ ವೈದ್ಯರು ನೀಡಿದ ಔಷಧಿ ಚೀಟಿಯನ್ನೂ ತರಬೇಕಿದೆ. ನಿಷೇಧಿತ ವಸ್ತುಗಳನ್ನು ತರಲು ಪ್ರಯತ್ನಿಸುವವರಿಗೆ ದೊಡ್ಡ ಮೊತ್ತದ ದಂಡ ಮತ್ತು ಜೈಲು ಶಿಕ್ಷೆಯನ್ನೂ ಅನುಭವಿಸಬೇಕಾದೀತೆಂದು ಕಸ್ಟಮ್ಸ್ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು