ಯುಎಇ: ಇಂದಿನಿಂದ ಕಾರ್ಮಿಕರಿಗೆ ಮಧ್ಯಾಹ್ನದ ವಿರಾಮ ಜಾರಿ

Share on facebook
Share on twitter
Share on linkedin
Share on whatsapp
Share on telegram
Share on email
Share on print

ದುಬೈ: ಬೇಸಿಗೆ ಕಾಲವು ಆಗಮನವಾದ ಹಿನ್ನೆಲೆಯಲ್ಲಿ ಯುಎಇ ಸೇರಿದಂತೆ ಮಧ್ಯಪ್ರಾಚ್ಯ ದೇಶಗಳಲ್ಲಿ ಬಿಸಿಲ ಧಗೆ ದಿನದಿಂದ ದಿನಕ್ಕೆ ಏರಲು ತೊಡಗಿದೆ.‍ ಹೀಗಾಗಿ ಬಿಸಿಲು ನೇರವಾಗಿ ಮೈ ಮೇಲೆ ಬೀಳುವ ಯಾವುದೇ ಉದ್ಯೋಗಿಗಳಿಗೆ ಮತ್ತಿತರ ಹೊರಾಂಗಣ ಕಾರ್ಮಿಕರಿಗೆ ಮಧ್ಯಾಹ್ನದ ವಿರಾಮ ಜಾರಿಗೆ ಬಂದಿದೆ.

ಮಧ್ಯಾಹ್ನ 12:30 ರಿಂದ ಸಂಜೆ 3 ಗಂಟೆಯ ವರೆಗೆ ಹೊರಾಂಗಣ ಕಾರ್ಮಿಕರು ಕೆಲಸ ಮಾಡುವುದಕ್ಕೆ ಇಂದಿನಿಂದ ನಿಷೇಧವಿರಲಿದೆ ಎಂದು ಯುಎಇ ಮಾನವ ಸಂಪನ್ಮೂಲ ಸಚಿವಾಲಯವು ತಿಳಿಸಿದೆ.

ಜೂನ್ 15 ರಿಂದ ಸೆಪ್ಟೆಂಬರ್ 15 ವರೆಗೆ ನಿಷೇಧವು ಜಾರಿಯಲ್ಲಿರಲಿದೆ. ಯಾವುದೇ ಸಂಸ್ಥೆಯು ಇದನ್ನು ಉಲ್ಲಂಘಿಸಿದಲ್ಲಿ , ಕೆಲಸದಲ್ಲೇರ್ಪಟ್ಟ ಒಬ್ಬೊಬ್ಬ ಕಾರ್ಮಿಕನಿಗೆ 5000 ದಿರ್ಹಮ್ ನಂತೆ ಕಂಪೆನಿಗೆ ದಂಡ ವಿಧಿಸಲಾಗುವುದು. ರೀತಿ ಒಂದು ಕಂಪೆನಿಗೆ ಗರಿಷ್ಠ 50,000 ದಿರ್ಹಮ್ ವರೆಗೂ ದಂಡ ವಿಧಿಸಲಾಗುವುದು. ಅಲ್ಲದೇ ಅಂತಹ ಸಂಸ್ಥೆಯ ಪರವಾನಿಗೆ ರದ್ದುಗೊಳಿಸುವುದು ಸೇರಿದಂತೆ ವಿವಿಧ ಕಾನೂನು ಕ್ರಮಗಳನ್ನು ತೆಗೆದುಕೊಳ್ಳುವ ಬಗ್ಗೆಯೂ ಸಚಿವಾಲಯವು ಮುನ್ನೆಚ್ಚರಿಕೆ ನೀಡಿದೆ.

ಕಾನೂನುಗಳನ್ನು ಉಲ್ಲಂಘಿಸುವ ಬಗ್ಗೆ ಕಂಡು ಬಂದರೆ, 80060 ಎಂಬ ಸಂಖ್ಯೆಗೆ ದಿನದ ಇಪ್ಪತ್ತನಾಲ್ಕು ಗಂಟೆಯಲ್ಲಿ ಯಾವ ಸಮಯದಲ್ಲೂ ಕರೆ ಮಾಡಿ ಮಾಹಿತಿ ಕೊಡಬಹುದೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ದಿನದಲ್ಲಿ ಎಂಟು ಗಂಟೆಗಳ ಸಮಯವಷ್ಟೇ ಕಾರ್ಮಿಕರನ್ನು ದುಡಿಸಿಕೊಳ್ಳಬಹುದಾಗಿದ್ದು, ಅದಕ್ಕಿಂತ ಹೆಚ್ಚಿಗೆ ಕೆಲಸ ನೀಡುವುದಾದರೆ, ಅದಕ್ಕನುಗುಣವಾಗಿ ಹೆಚ್ಚುವರಿ ವೇತನ ನೀಡಬೇಕಿದೆ.

ಕೆಲಸದ ಸ್ಥಳದಲ್ಲಿ ಕೆಲಸದ ಸಮಯದ ಬಗ್ಗೆ ಎಲ್ಲಾ ಕೆಲಸಗಾರರಿಗೆ ಕಾಣುವ ರೀತಿಯಲ್ಲಿ ಬರೆದಿರಬೇಕು. ಅರಬಿ ಭಾಷೆಯ ಜೊತೆಗೆ ಕಾರ್ಮಿಕರಿಗೆ ಅರ್ಥವಾಗುವ ಭಾಷೆಯಲ್ಲೂ ಬಗ್ಗೆ ಬರಹಗಳಿರಬೇಕಿದೆ. ಕಾರ್ಮಿಕರಿಗೆ ಅಪಘಾತ ಮತ್ತು ಗಾಯಗಳಿಂದ ರಕ್ಷಣೆ ಪಡೆಯಲು ಬೇಕಾದ ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು, ಸೌಲಭ್ಯಗಳನ್ನು ಸಂಸ್ಥೆಯು ಒದಗಿಸಬೇಕಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು