ಅನಿವಾಸಿ ಕನ್ನಡಿಗರ ಒಕ್ಕೂಟ, ಯುಎಇ ವತಿಯಿಂದ ದುಬೈಯ ಲತೀಫಾ ಆಸ್ಪತ್ರೆಯಲ್ಲಿ ಬೃಹತ್ ರಕ್ತದಾನ ಶಿಬಿರ | ಜನಮನ ಸೆಳೆಯಿತು ಕಾರ್ಯಕ್ರಮ

Share on facebook
Share on twitter
Share on linkedin
Share on whatsapp
Share on telegram
Share on email
Share on print

ದುಬೈ : ಹಲವಾರು ವರ್ಷಗಳಿಂದ ಯುಎಇಯಾದ್ಯಂತ ಸಾಮಾಜಿಕ ರಂಗದಲ್ಲಿ ಸೇವೆಗೈಯುತ್ತಿರುವ ಅನಿವಾಸಿ ಕನ್ನಡಿಗರ ಒಕ್ಕೂಟ, ಯುಎಇ ಇದರ ವತಿಯಿಂದ ಬೃಹತ್ ರಕ್ತದಾನ ಶಿಬಿರವನ್ನು ಆಯೋಜಿಸಲಾಯಿತು. ದುಬೈಯ ಲತೀಫಾ ಆಸ್ಪತ್ರೆಯಲ್ಲಿ ಜರುಗಿದ ಬೃಹತ್ ಕಾರ್ಯಕ್ರಮವು ಬಹಳ ಅಚ್ಚುಕಟ್ಟಾಗಿ ನೆರವೇರಿ, ಜನಮನ ಸೆಳೆಯಿತು.

ಅನಿವಾಸಿ ಕನ್ನಡಿಗರ ಒಕ್ಕೂಟ, ಯುಎಇಯ ಪ್ರಮುಖ ಶಾಫಿ ಬಜ್ಪೆಯವರು ಮಾತನಾಡಿ, ಪ್ರತಿಯೊಬ್ಬ ರಕ್ತದಾನಿಯೂ ಇನ್ನೊಬ್ಬರ ಜೀವ ರಕ್ಷಕನಾಗಿರುತ್ತಾನೆ. ಪ್ರತಿಯೊಬ್ಬರೂ ರಕ್ತದಾನ ನೀಡುವ  ಮೂಲಕ ಮಾನವೀಯತೆಯನ್ನು ಮೈಗೂಡಿಸಿಕೊಳ್ಳಬೇಕು ಎಂಬ ಸಂದೇಶದೊಂದಿಗೆ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಶಿಬಿರದಲ್ಲಿ ಬರೋಬ್ಬರಿ ಒಟ್ಟು 105 ಜೀವದಾನಿಗಳು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡುವ ಮೂಲಕ ಕಾರ್ಯಕ್ರಮದ ಸಂಪೂರ್ಣ ಯಶಸ್ವಿಗೆ ಕಾರಣರಾದರು.

 

ಜಾತಿ ಮತ ಪಂಗಡಗಳನ್ನು ಮರೆತು, ವಿವಿಧತೆಯಲ್ಲಿ ಏಕತೆಯನ್ನು ಸಾರುವ ಭವ್ಯ ಭಾರತದ ವಿವಿಧ ಭಾಗಗಳಿಂದ ಯುಎಇಗೆ ಬಂದು ನೆಲೆಸಿರುವ ಅನಿವಾಸಿ ಭಾರತೀಯರು, ಕಾರ್ಯಕ್ರಮಕ್ಕೆ ಕ್ಲಪ್ತ ಸಮಯಕ್ಕೆ ಬಂದು ರಕ್ತದಾನ ಮಾಡಿ ಜೀವದಾನಿಗಳಾಗಿ ಬದಲಾದರು ಎಂದು ಅನಿವಾಸಿ ಕನ್ನಡಿಗರ ಒಕ್ಕೂಟವು ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದೆ.

ಜೊತೆಗೆ ಅಚ್ಚುಕಟ್ಟಾದ ರೀತಿಯಲ್ಲಿ ಕಾರ್ಯಕ್ರಮವನ್ನು ನೆರವೇರಿಸಿದ, ಅನಿವಾಸಿ ಕನ್ನಡಿಗರ ಒಕ್ಕೂಟದ ಕಾರ್ಯವೈಖರಿಯನ್ನು ಲತೀಫಾ ಆಸ್ಪತ್ರೆಯ ಆಡಳಿತ ಮಂಡಳಿಯು ಶ್ಲಾಘಿಸಿದೆ. ಅನಿವಾಸಿ ಕನ್ನಡಿಗರ ಒಕ್ಕೂಟ ಯುಎಇ ಇದರ ಅಧ್ಯಕ್ಷರಾಗಿರುವ ಜನಾಬ್ ಶಂಸುದ್ದೀನ್ ಉಡುಪಿಯವರು ಕಾರ್ಯಕ್ರಮದಲ್ಲಿ ಭಾಗವಹಿಸಿ ರಕ್ತದಾನ ಮಾಡಿದ, ಎಲ್ಲರಿಗೂ ಅಭಿನಂದನಾ ಪತ್ರ ನೀಡಿ ಗೌರವಿಸಿದರು.

 

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು