ಅಬುಧಾಬಿ(17-10-2020): ಶಾರ್ಜಾ ವಿಮಾನ ನಿಲ್ದಾಣಕ್ಕೆ ಹೋಗುವವರಿಗೆ ಏರ್ ಇಂಡಿಯಾ ಮತ್ತು ಏರ್ ಇಂಡಿಯಾ ಎಕ್ಸ್ಪ್ರೆಸ್ ಮಹತ್ವದ ಸೂಚನೆಯೊಂದನ್ನು ನೀಡಿದೆ. ಅಬುಧಾಬಿಯಲ್ಲಿ ವಾಸಿಸುವ ಅನಿವಾಸಿ ಭಾರತೀಯರು ಶಾರ್ಜಾ ವಿಮಾನ ನಿಲ್ದಾಣದಲ್ಲಿ ಇಳಿಯುವುದಾದರೆ, ಅಂಥವರು “ಫೆಡರಲ್ ಅಥಾರಿಟಿ ಫಾರ್ ಐಡೆಂಟಿಟಿ ಆ್ಯಂಡ್ ಸಿಟಿಜನ್ಶಿಪ್”ನ ಅನುಮತಿ ಪಡೆದಿರಬೇಕೆಂದು ಅವು ತಿಳಿಸಿವೆ.
ಈ ಹೊಸ ಆದೇಶವು ಈಗಾಗಲೇ ಜಾರಿಗೆ ಬಂದಿದೆ ಎಂದು ಏರ್ ಇಂಡಿಯಾ ಎಕ್ಸ್ಪ್ರೆಸ್ ತನ್ನ ಫೇಸ್ಬುಕ್ ಪೇಜಿನಲ್ಲಿ ಹೇಳಿಕೊಂಡಿದೆ. ಅಲ್ ಐನ್ ಮತ್ತು ಅಬುದಾಬಿಯಲ್ಲಿ ಹೊರಡಿಸಿದ ರೆಸಿಡೆನ್ಸ್ ವೀಸಾ ಇರುವವರು, ಶಾರ್ಜಾಗೆ ಹೋಗುವುದಾದರೆ ಐಸಿಎ ಅನುಮತಿಯನ್ನು ಪಡೆದಿರಬೇಕೆಂಬುದು ಶರತ್ತು.
“ಏರ್ ಅರೇಬಿಯಾ” ಕೂಡಾ ಅಲ್ ಐನ್ ಮತ್ತು ಅಬುಧಾಬಿ ವೀಸಾ ಹೊಂದಿರುವವರು ಶಾರ್ಜಾಗೆ ತೆರಳುವ ಮೊದಲು http://uaeentry.ica.gov.ae/ ಎಂಬ ವೆಬ್ಸೈಟಿಗೆ ಭೇಟಿ ಕೊಟ್ಟು, ಅದರ ಸೂಚನೆಗಳನ್ನು ಪಾಲಿಸಬೇಕೆಂದು ತಿಳಿಸಿದೆ.