ಟ್ವೀಟುಗಳನ್ನು ತೆಗೆದು ಹಾಕಿದ ಕ್ರಮವನ್ನು ಸಮರ್ಥಿಸಿದ ಕೇಂದ್ರ ಸರಕಾರ | ವ್ಯಾಪಕ ಆಕ್ರೋಶ

Share on facebook
Share on twitter
Share on linkedin
Share on whatsapp
Share on telegram
Share on email
Share on print

ನವದೆಹಲಿ: ತಪ್ಪು ಸಂದೇಶಗಳನ್ನು ಬಿತ್ತರಿಸಿರುವುದಕ್ಕಾಗಿ ಸಾಮಾಜಿಕ ಜಾಲತಾಣದ ನೂರು ಪೋಸ್ಟುಗಳನ್ನು ತೆಗೆದು ಹಾಕಲು ಹೇಳಿರುವುದಾಗಿ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ತಿಳಿಸಿದೆ. ಸಚಿವಾಲಯದ ಈ ಸಮರ್ಥನೆಯ ನಂತರ ಸರಕಾರದ ನಡೆಯ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.

ಕೋವಿಡ್ ಸಾಂಕ್ರಾಮಿಕ ರೋಗವನ್ನು ನಿರ್ವಹಣೆ ಮಾಡುವಲ್ಲಿ ಸರಕಾರದ ವೈಫಲ್ಯವನ್ನು ಟೀಕಿಸಿದ ಟ್ವೀಟುಗಳನ್ನು ತೆಗೆದು ಹಾಕುವಂತೆ ಕೇಂದ್ರ ಸರಕಾರವು ಟ್ವಿಟರ್ ಮೇಲೆ ಒತ್ತಡ ಹೇರಿತ್ತು ಎಂದು ವರದಿಯಾಗಿತ್ತು. ಹಿನ್ನೆಲೆಯಲ್ಲಿ ಸರಕಾರದಿಂದ ಈ ಸಮರ್ಥನೆ ಬಂದಿದೆ. ಅವೆಲ್ಲವೂ ಸುಳ್ಳು ಸುದ್ದಿಗಳಾಗಿದ್ದವು ಎಂದು ಸರಕಾರ ಹೇಳಿಕೊಂಡಿದೆ.

ಕೋವಿಡ್ ಎರಡನೇ ಅಲೆಯು ದೇಶದಲ್ಲಿ ಉಂಟು ಮಾಡಿದ ಸಂದಿಗ್ಧತೆ ಮತ್ತು ಮಾರ್ಪಾಡು ಮಾಡಲಾದ ಲಸಿಕೆ ನೀತಿಯ ವಿಚಾರದಲ್ಲಿ ಸರಕಾರವನ್ನು ಟೀಕಿಸಿ ಮಾಡಲಾದ ಟ್ವೀಟುಗಳನ್ನು ಅಳಿಸಿ ಹಾಕುವಂತೆ ಕೇಂದ್ರವು ಟ್ವಿಟರ್ ಮೇಲೆ ಒತ್ತಡ ಹೇರಿತ್ತು ಎಂದು ವರದಿಯಾಗಿದ್ದವು. ಕೇಂದ್ರದ ಸೂಚನೆಯಂತೆ ಐವತ್ತು ಟ್ವೀಟುಗಳನ್ನು ತೆಗೆದು ಹಾಕಿರುವುದಾಗಿ ಟ್ವಿಟರ್ ಕೂಡಾ ಮಾಹಿತಿ ನೀಡಿತ್ತು.

ಮೋದಿ ಮೇಡ್ ಡಿಸಾಸ್ಟರ್ ಎಂಬ ಹ್ಯಾಶ್‍ಟ್ಯಾಗ್ ಹೊಂದಿರುವ ಟ್ವೀಟುಗಳು ಮತ್ತು ಕೋವಿಡ್ ತೀವ್ರವಾಗಿದ್ದ ಸಂದರ್ಭದಲ್ಲಿ ಸರಕಾರವು ಕುಂಭಮೇಳಕ್ಕೆ ಅನುಮತಿ ನೀಡಿರುವುದನ್ನು ಟೀಕಿಸುವ ಟ್ವೀಟುಗಳೂ ತೆಗೆದು ಹಾಕಲಾದ ಟ್ವೀಟುಗಳಲ್ಲಿ ಸೇರಿದ್ದವು.

ಕೇಂದ್ರ ಸರ್ಕಾರವು ಟ್ವಿಟರ್ ಕಂಪನಿಗೆ ನೋಟಿಸ್ ಕಳುಹಿಸಿದ ನಂತರ ಸಂಸತ್ ಸದಸ್ಯ ರೇವಂತ್ ರೆಡ್ಡಿ, ಪಶ್ಚಿಮ ಬಂಗಾಳ ಸಚಿವ ಮೊಲೊಯ್ ಘಟಕ್, ನಟ ವಿನೀತ್ ಕುಮಾರ್ ಸಿಂಗ್, ಚಲನಚಿತ್ರ ನಿರ್ಮಾಪಕರಾದ ವಿನೋದ್ ಕಪ್ರಿ ಮತ್ತು ಅವಿನಾಶ್ ದಾಸ್ ಅವರ ಟ್ವೀಟರ್ ಖಾತೆ‌ಗಳು ಸೇರಿದಂತೆ ಕೆಲವು ಜನಪ್ರಿಯ ಖಾತೆ‌ಗಳು ಮಾಡಿದ ಹಲವಾರು ಟ್ವೀಟ್‌ಗಳಿಗೆ ಟ್ವಿಟರ್ ನಿರ್ಬಂಧ ವಿಧಿಸಿದೆ.

ಸರಕಾರದ ಟ್ವಿಟರ್ ನೀತಿಯನ್ನು ಉಲ್ಲಂಘಿಸಿದ ಕಾರಣದಿಂದ ನಿಮ್ಮ ಟ್ವೀಟುಗಳನ್ನು ತೆಗೆದು ಹಾಕಲಾಗಿದೆಯೆಂಬ ನೋಟಿಫಿಕೇಶನುಗಳೂ ಖಾತೆದಾರರಿಗೆ ಟ್ವಿಟರ್ ಕಡೆಯಿಂದ ಬಂದಿದ್ದವು.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು