ಮುಂಬೈ(08/10/2020): ಟಿವಿ ಚಾನೆಲ್ ವೀಕ್ಷಕರ ಪ್ರಮಾಣ ಲೆಕ್ಕ ಹಾಕಲು ಬಳಕೆಯಾಗುತ್ತಿರುವ ಮಾನದಂಡವಾದ ಟಿಆರ್ಪಿಯನ್ನು ತಿರುಚಿದ್ದಕ್ಕಾಗಿ ಇಬ್ಬರನ್ನು ಬಂಧಿಸಲಾಗಿದ್ದು, ರಿಪಬ್ಲಿಕ್ ಟಿವಿ ಸೇರಿದಂತೆ ಮೂರು ಚಾನೆಲ್ಗಳನ್ನು ತನಿಖೆಗೆ ಒಳಪಡಿಸಲಾಗುತ್ತದೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.
ಅತಿ ಹೆಚ್ಚು TRP ಹೊಂದಿದ್ದೇವೆ ಎಂದು ಹೇಳಿಕೊಳ್ಳುತ್ತಿರುವ ರಿಪಬ್ಲಿಕ್ ಟಿವಿಯ ಅಧಿಕಾರಿಗಳನ್ನು ತನಿಖೆಗೆ ಇಂದು ಅಥವಾ ನಾಳೆ ಕರೆಸಲಾಗುವುದು ಎನ್ಡಿಟಿವಿ ವರದಿ ಮಾಡಿದೆ.
ಮೂರು ಟಿವಿ ಚಾನೆಲ್ಗಳ ಟಿಆರ್ಪಿ ವಂಚನೆಯನ್ನು ಮುಂಬೈ ಪೊಲೀಸರು ಬಯಲು ಮಾಡಿದ್ದು, ರಿಪಬ್ಲಿಕ್ ಟಿವಿ ನಿರ್ದೇಶಕರಿಗೆ ಸಮನ್ಸ್ ನೀಡಲಾಗಿದೆ.
ಮುಂಬೈ ಅಪರಾಧ ವಿಭಾಗದ ಸಿಐಡಿ ತಂಡ ಆಗಲೇ ಎರಡು ಚಾನೆಲ್ಗಳ ಮಾಲೀಕರನ್ನು ಬಂಧಿಸಿದೆ ಹಾಗೂ ಹಗರಣದ ಸಂಬಂಧ ಹಲವು ವ್ಯಕ್ತಿಗಳಿಗೆ ಸಮನ್ಸ್ ಹೊರಡಿಸಿದೆ.
‘ಟಿಆರ್ಪಿ ತಿದ್ದುಪಡಿ ಮಾಡುತ್ತಿದ್ದ ಮೂರು ಚಾನೆಲ್ಗಳು ರಿಪಬ್ಲಿಕ್ ಟಿವಿ, ಫಕ್ತ್ ಮರಾಠಿ ಹಾಗೂ ಬಾಕ್ಸ್ ಸಿನಿಮಾ’ ಎಂದು ಮುಂಬೈ ಪೊಲೀಸ್ ಕಮಿಷನರ್ ಪರಂ ವೀರ್ ಸಿಂಗ್ ಹೇಳಿದ್ದಾರೆ.