ವಾಷಿಂಗ್ ಟನ್(14/11/2020): ಸೇತುವೆಯೊಂದರ ದುಸ್ಥಿತಿಯ ಬಗ್ಗೆ ಟಿವಿ ವಾಹಿನಿಗೆ ವರದಿ ಮಾಡುತ್ತಿದ್ದ ವೇಳೆ ಪತ್ರಕರ್ತೆಯೊಬ್ಬಳು ಸೇತುವೆ ಕುಸಿದು ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾದ ಘಟನೆ ಅಮೆರಿಕದಲ್ಲಿ ನಡೆದಿದೆ.
ಅಮೆರಿಕದ ಫಾಕ್ಸ್ 46 ಎಂಬ ಟಿವಿ ವಾಹಿನಿಯೊಂದಕ್ಕೆ ಭಾರೀ ಮಳೆಯ ಕಾರಣದಿಂದ ಸೇತುವೆಯೊಂದು ಕುಸಿದು ಬೀಳುವ ಹಂತಕ್ಕೆ ತಲುಪಿರುವುದನ್ನು ಅಂಬಾರ ರಾಬರ್ಟ್ ಎನ್ನುವ ಪತ್ರಕರ್ತೆ ಲೈವ್ ರಿಪೋರ್ಟ್ ಮಾಡುತ್ತಿದ್ದಳು. ಈ ವೇಳೆ ಇದ್ದಕ್ಕಿದ್ದಂತೆ ಸೇತುವೆಯ ಮಧ್ಯಭಾಗ ಕುಸಿದಿದ್ದು, ವರದಿಗಾರ್ತಿ ಸ್ವಲ್ಪದರಲ್ಲೇ ಜೀವಹಾನಿಯಿಂದ ಪಾರಾಗಿದ್ದಾಳೆ.
ಸದ್ಯ ಈ ವಿಡಿಯೋ ಈಗ ವೈರಲ್ ಆಗಿದ್ದು, ಕೆಲವೇ ಗಂಟೆಗಳ ಅವಧಿಯಲ್ಲಿ ಸೋಷಿಯಲ್ ಮೀಡಿಯದಲ್ಲಿ ಈ ದಿಟ್ಟ ಪತ್ರಕರ್ತೆ ಲಕ್ಷಾಂತರ ಫಾಲೋವರ್ಸ್ ಗಳನ್ನು ಪಡೆದಿದ್ದಾರೆ. ಮಾತ್ರವಲ್ಲದೆ, ವಿಶ್ವದಾದ್ಯಂತ ಗಮನವನ್ನು ಸೆಳೆದಿದ್ದಾರೆ.