ನವದೆಹಲಿ(02-03-2021): ಭಾರತೀಯ ಸಂಸತ್ತು ಲೋಕಸಭೆ ಮತ್ತು ರಾಜ್ಯಸಭೆ ಎಂಬ ತನ್ನ ಎರಡು ಟಿವಿ ಚಾನೆಲ್ಗಳನ್ನು ಸಂಯೋಜಿಸಿ ಸಂಸದ್ ಟಿವಿಯನ್ನು ರಚಿಸಿದೆ. ಇದು ಹೊಸ ವೇದಿಕೆಯಾಗಿದ್ದು, ಇದು ಪ್ರಸಾರವನ್ನು ಮುಂದುವರೆಸುತ್ತದೆ ಮತ್ತು ಹಿಂದಿ ಮತ್ತು ಇಂಗ್ಲಿಷ್ನಲ್ಲಿ ಸುದ್ದಿ ಮತ್ತು ಪ್ರಸಕ್ತ ವ್ಯವಹಾರಗಳ ಕಾರ್ಯಕ್ರಮವನ್ನು ಪ್ರಸಾರ ಮಾಡಲಿದೆ.
ಮಾಜಿ ಜವಳಿ ಇಲಾಖೆ ಕಾರ್ಯದರ್ಶಿ ರವಿ ಕಪೂರ್ ಅವರನ್ನು ಗುತ್ತಿಗೆ ಆಧಾರದ ಮೇಲೆ ಒಂದು ವರ್ಷದ ಅವಧಿಗೆ ಹೊಸ ಘಟಕದ ಸಿಇಒ ಆಗಿ ನೇಮಕ ಮಾಡಲಾಗಿದೆ ಎಂದು ಲೋಕಸಭಾ ಸಚಿವಾಲಯದ ಆಂತರಿಕ ಆದೇಶ ತಿಳಿಸಿದೆ.
2019ರಲ್ಲಿ ಪ್ರಸಾರ್ ಭಾರತಿ ಸಿಇಒ ಸೂರ್ಯ ಪ್ರಕಾಶ್ ನೇತೃತ್ವದ ತಜ್ಞರ ಸಮಿತಿಯು ಈ ಯೋಜನೆಯನ್ನು ಪ್ರಸ್ತಾಪಿಸಿದೆ ವೆಚ್ಚವನ್ನು ಕಡಿಮೆ ಮಾಡುವುದು, ಚಾನೆಲ್ನ ನಿರ್ವಹಣೆಯನ್ನು ಸುಗಮಗೊಳಿಸುವುದು ಮತ್ತು ವೀಕ್ಷಕರಿಗೆ ಮತ್ತು ಜಾಹೀರಾತುದಾರರಿಗೆ ಹೆಚ್ಚು ಆಕರ್ಷಕವಾಗುವಂತೆ ವಿಷಯವನ್ನು ಪುನರುಜ್ಜೀವನಗೊಳಿಸುವ ಗುರಿಯನ್ನು ಈ ಮೂಲಕ ಹೊಂದಲಾಗಿದೆ.