ಮಾನಹಾನಿ ವರದಿಗಳನ್ನು ನಿಲ್ಲಿಸಿ: ಟಿವಿ ವಾಹಿನಿಗಳಿಗೆ ಕೇಂದ್ರದ ತಾಕೀತು

tv
Share on facebook
Share on twitter
Share on linkedin
Share on whatsapp
Share on telegram
Share on email
Share on print

ಹೊಸದೆಹಲಿ(09/10/2020):  ಖಾಸಗಿ ಟಿವಿ ಚಾನೆಲ್‌ಗಳು ಕೇಂದ್ರ ಸರಕಾರದ ಕಾರ್ಯಕ್ರಮ ನೀತಿಗೆ ಬದ್ಧರಾಗಿರುವಂತೆ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಇಂದು ಹೇಳಿದೆ.

ಟಿವಿ ಚಾನೆಲ್‌ಗಳು ಕಾರ್ಯಕ್ರಮಗಳನ್ನು ಪ್ರಸಾರ ಮಾಡುವಾಗ ಯಾವುದೇ ವ್ಯಕ್ತಿ ಅಥವಾ ಗುಂಪುಗಳನ್ನು ಟೀಕಿಸುವುದು, ಅವಮಾನಿಸುವುದು ಅಥವಾ ಅಪಪ್ರಚಾರ ಮಾಡದೆ, ಕೇಬಲ್‌ ಟಿವಿ ಸಂಪರ್ಕ (ನಿಯಂತ್ರಣ) ಕಾಯ್ದೆ(1995)ಯಲ್ಲಿರುವ ಕಾರ್ಯಕ್ರಮ ಮತ್ತು ಜಾಹೀರಾತು ನೀತಿಗಳಿಗೆ ಬದ್ಧರಾಗಿ ಕಾರ್ಯಕ್ರಮ ಪ್ರಸಾರ ಮಾಡುವಂತೆ ಹೇಳಿದೆ.

ಇತ್ತೀಚೆಗಷ್ಟೇ ನಟಿ ರಾಕುಲ್‌ ಪ್ರೀತ್‌ ಸಿಂಗ್‌  ಡ್ರಗ್ಸ್‌ ವಿಚಾರದ ತನಿಖೆಗೆ ಸಂಬಂಧಿಸಿದಂತೆ ಟಿವಿ ವಾಹಿನಿಗಳು ಮಾನಹಾನಿ ಮಾಡುವಂತಹ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಿರುವುದಾಗಿ ಆರೋಪಿಸಿ ದೆಹಲಿ ಹೈ ಕೋರ್ಟ್‌ಗೆ ಮೆಟ್ಟಿಲೇರಿದ್ದರು. ಅದರ ಬೆನ್ನಲ್ಲೇ ಸಚಿವಾಲಯ ಈ ಸಲಹೆಗಳನ್ನು ಹೊರಡಿಸಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು