ವಾಷಿಂಗ್ಟನ್(20-01-2021): ಜೋ ಬಿಡೆನ್ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕಾರಕ್ಕೆ ಮುನ್ನಾದಿನ ಇದೇ ಮೊದಲ ಬಾರಿಗೆ ಟ್ರಂಪ್ ಜೋ ಬಿಡೆನ್ ಗೆ ಶುಭಾಶಯವನ್ನು ಕೋರಿದ್ದಾರೆ.
ಅಮೆರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಸೋತ ಬಳಿಕ ಟ್ರಂಪ್ ಶ್ವೇತ ಭವನವನ್ನು ಬಿಟ್ಟು ತೆರಳದೆ ಮತ್ತು ಅಧಿಕಾರವನ್ನು ಹಸ್ತಾಂತರಿಸದೆ ಹಲವು ಕಸರತ್ತನ್ನು ನಡೆಸಿದ್ದರು.
ಒಂದು ವಾರದಿಂದ ಸಾರ್ವಜನಿಕವಾಗಿ ಕಾಣಿಸದ ಟ್ರಂಪ್, ವಿಡಿಯೊ ವಿದಾಯ ಭಾಷಣದೊಂದಿಗೆ ಬಹು ದಿನಗಳ ಬಳಿಕದ ಮೌನವನ್ನು ಮುರಿದಿದ್ದಾರೆ. ಅದನ್ನು ಶ್ವೇತಭವನವು ಒಂದು ದಿನದ ನಂತರ ಬಿಡುಗಡೆ ಮಾಡಲಿದೆ ಎಂದು ಹೇಳಿದೆ.
ಇನ್ನೊಂದು ಕಡೆ ಬಿಡೆನ್ ಮಾತನಾಡಿ, ಈ ಅದ್ಭುತ ಸಂದರ್ಭದಲ್ಲಿ ಮೃತ ಕುಟುಂಬಸ್ಥರು ಈ ವೇಳೆ ನನ್ನ ಬಳಿ ಇಲ್ಲ ಎಂದು ಕಣ್ಣೀರು ಹಾಕಿದ್ದಾರೆ.