“ನಾವು ಗೆಲ್ಲಲಿದ್ದೇವೆ!” ಚುನಾವಣೆಯ ಗುಂಗಿನಿಂದ ಇನ್ನೂ ಹೊರ ಬರದ ಟ್ರಂಪ್

Share on facebook
Share on twitter
Share on linkedin
Share on whatsapp
Share on telegram
Share on email
Share on print

ವಾಷಿಂಗ್ಟನ್ ಡಿಸಿ(10-11-2020): ಅಮೇರಿಕಾ ಚುನಾವಣೆಯಲ್ಲಿ ನಿಜಕ್ಕೂ ನಾವೇ ವಿಜಯಗೊಂಡಿದ್ದೇವೆ ಎಂಬ ರೀತಿಯಲ್ಲಿ ಮತ್ತೊಮ್ಮೆ ಟ್ರಂಪ್ ವಾದಿಸಿದ್ದಾನೆ. ನಿನ್ನೆ ರಾತ್ರಿ ತನ್ನ ಟ್ವಿಟರ್ ಖಾತೆಯಲ್ಲಿ “ನಾವು ಜಯಿಸಲಿದ್ದೇವೆ!” ಎಂದು ಬರೆದುಕೊಂಡಿದ್ದಾನೆ.

ಧೀರ್ಘಕಾಲದ ಅಮೇರಿಕಾ ಚುನಾವಣಾ ಕೊನೆಗೊಂಡು, ಫಲಿತಾಂಶ ಪ್ರಕಟವಾಗಿ, ಜೋ ಬೈಡನ್ ಅಮೇರಿಕಾದ ಅಧ್ಯಕ್ಷ ನಲವತ್ತಾರನೇ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಆ ಬಳಿಕವೂ ಯಾವುದೇ ಸಾಕ್ಷ್ಯಗಳಿಲ್ಲದೇ ನಾವೇ ವಿಜಯ ಸಾಧಿಸಲಿದ್ದೇವೆ ಎಂದು ಟ್ರಂಪ್ ಟ್ವೀಟ್ ಮಾಡಿರುವುದು ಹಲವರನ್ನು ಹುಬ್ಬೇರಿಸುವಂತೆ ಮಾಡಿದೆ.

ನಿಜಕ್ಕೂ ಚುನಾವಣೆಯಲ್ಲಿ ಜಯ ಸಾಧಿಸಿರುವುದು ನಾವೇ ಆಗಿದ್ದೇವೆ. ಆದರೆ ಜೋ ಬೈಡನಿನ ಡೆಮಾಕ್ರಟಿಕ್ ಪಕ್ಷವು ಚುನಾವಣಾ ಅಕ್ರಮಗಳನ್ನು ಮಾಡಿ, ಅಧಿಕಾರವನ್ನು ಕಬಳಿಸಿದೆ. ಇದಕ್ಕೆ ನಾವು ಅವಕಾಶ ಮಾಡಿಕೊಡುವುದಿಲ್ಲ ಎಂದು ಟ್ರಂಪ್ ಹಲವು ಬಾರಿ ಹೇಳಿದ್ದ.

ಬೈಡನ್ ಜಯಗಳಿಸಿದ ರಾಜ್ಯಗಳಲ್ಲಿ ನಡೆದ ಚುನಾವಣೆಯ ಬಗೆಗೆ ಸಂದೇಹ ವ್ಯಕ್ತಪಡಿಸಿದ ಟ್ರಂಪ್, ರಾಜ್ಯಗಳು ಅಧಿಕೃತವಾಗಿ ಬೈಡನನ್ನು ಅಧ್ಯಕ್ಷನಾಗಿ ಒಪ್ಪಿಲ್ಲವೆಂದೂ ಆರೋಪಿಸಿದ್ದಾನೆ. ಚುನಾವಣಾ ಅಕ್ರಮಗಳು ನಡೆದ ಕ್ಷೇತ್ರಗಳಲ್ಲಿ ಮತ್ತೊಮ್ಮೆ ಮತ ಎಣಿಕೆ ನಡೆಸಬೇಕೆಂದು ಕೋರಿ ಟ್ರಂಪ್ ನ್ಯಾಯಾಲಯದ ಕದ ತಟ್ಟಬಹುದೆಂದು ಹಲವು ರಾಜಕೀಯ ತಜ್ಞರು ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದಾರೆ .

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು