ವಾಷಿಂಗ್ಟನ್ (2-10-2020): ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಪತ್ನಿಗೆ ಕೋವಿಡ್ ದೃಢಪಟ್ಟಿರುವ ಬಗ್ಗೆ ಅವರು ಟ್ವೀಟ್ ಮಾಡಿದ್ದಾರೆ.
ನನಗೆ ಹಾಗೂ ಅಮೆರಿಕಾದ ಪ್ರಥಮ ಮಹಿಳೆಗೆ ಕೊರೋನಾ ವೈರಸ್ ದೃಢಪಟ್ಟಿದೆ. ಕ್ವಾರಂಟೈನ್ ಪ್ರಕ್ರಿಯೆ ಆರಂಭವಾಗಿದ್ದು, ಚಿಕಿತ್ಸೆ ಪ್ರಕ್ರಿಯೆಗಳೂ ಆರಂಭವಾಗುತ್ತಿವೆ. ಒಟ್ಟಿಗೆ ಚಿಕಿತ್ಸೆ ಪಡೆಯುತ್ತಿದ್ದೇವೆಂದು ಟ್ರಂಪ್ ಟ್ವೀಟ್ ನಲ್ಲಿ ತಿಳಿಸಿದ್ದಾರೆ.
ಈ ಹಿಂದೆ ಟ್ರಂಪ್ ಅವರ ಉನ್ನತ ಸಲಹೆಗಾರರಾದ ಹೋಪ್ ಹಿಕ್ಸ್ ಅವರಿಗೆ ಕೊರೋನಾ ಸೋಂಕು ದೃಢಪಟ್ಟಿತ್ತು.