ವಾಷಿಂಗ್ಟನ್ ಡಿಸಿ(14-11-2020): ಚುನಾವಣೆಯಲ್ಲಿ ಸೋತರೂ, ನಿಜಕ್ಕೂ ತಾನೇ ಗೆದ್ದಿರುವೆನೆಂದು ಹೇಳುತ್ತಾ ಬರುತ್ತಿದ್ದ ಟ್ರಂಪಿಗೆ ಈಗ ವಾಸ್ತವ ಪ್ರಜ್ಞೆಯ ಅರಿವಾಗತೊಡಗಿದೆ. ಪತ್ರಕರ್ತರ ಜೊತೆಗೆ ನಡೆದ ಮಾತುಕತೆಯ ವೇಳೆ, ಪರೋಕ್ಷವಾಗಿ ಸೋಲೊಪ್ಪಿಕೊಂಡಿರುವ ಮಾತುಗಳು ಟ್ರಂಪ್ ಬಾಯಿಯಿಂದ ಬಂದಿದೆ.
“ದೇಶದಲ್ಲಿ ಲಾಕ್ಡೌನ್ ಕಟ್ಟುನಿಟ್ಟಾಗಿ ಜಾರಿಗೊಳಿಸಿರಲಿಲ್ಲ. ಮುಂದೆ ಬರಲಿರುವ ಸರಕಾರ ಲಾಕ್ಡೌನನನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಿದೆಯೇ ಎಂದು ಕಾಲವೇ ನಿರ್ಧರಿಸಬೇಕು” ಎಂದು ಪತ್ರಕರ್ತರ ಮುಂದೆ ಹೇಳಿದ್ದಾರೆ. ಅದರೆ, ಚುನಾವಣೆಯಲ್ಲಿ ಸೋತಿರುವುದನ್ನು ನೀವು ಯಾವಾಗ ಸಮ್ಮತಿಸುತ್ತೀರಿ ಎಂಬ ಪ್ರಶ್ನೆಗೆ ಯಾವುದೇ ಉತ್ತರ ನೀಡಿಲ್ಲ.
ಚುನಾವಣೆಯಲ್ಲಿ ಅಕ್ರಮಗಳು ನಡೆದಿವೆ ಎಂದು ಟ್ರಂಪ್ ಆರೋಪಿಸಿದ್ದರು. ಆದರೆ ಸೈಬರ್ ಭದ್ರತಾ ಏಜೆನ್ಸಿಗಳು ಇದನ್ನು ತಳ್ಳಿಹಾಕಿ, ಅಮೇರಿಕಾ ಇತಿಹಾಸದಲ್ಲೇ ಇದು ಅತ್ಯಂತ ಭದ್ರತೆಯಿಂದ ನಡೆದ ಚುನಾವಣೆಯೆಂದು ಪ್ರತಿಕ್ರಿಯೆ ನೀಡಿದ್ದರು. ಟ್ರಂಪ್ ಆರೋಪಕ್ಕೆ ತನ್ನದೇ ರಿಪಬ್ಲಿಕನ್ ಪಕ್ಷದಲ್ಲೂ ಖಂಡನೆ ವ್ಯಕ್ತವಾಗಿತ್ತು.