ಯುಎಸ್(17-10-2020):ಅಮೆರಿಕಾ ಅಧ್ಯಕ್ಷೀಯ ಅಭ್ಯರ್ಥಿ ಜೋ ಬಿಡನ್ ಮುಸ್ಲಿಂ ಅಮೆರಿಕನ್ನರನ್ನು ತಮ್ಮ ಆಡಳಿತದ ಪ್ರತಿಯೊಂದು ಸಾಮಾಜಿಕ ಮತ್ತು ರಾಜಕೀಯ ಅಂಶಗಳಲ್ಲೂ ಸೇರಿಸಿಕೊಳ್ಳುವುದಾಗಿ ಭರವಸೆ ನೀಡಿದ್ದಾರೆ.
ಅಧಿಕಾರಕ್ಕೆ ಬಂದರೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿಧಿಸಿರುವ “ಮುಸ್ಲಿಂ ನಿಷೇಧ” ವನ್ನು ರದ್ದುಪಡಿಸುವುದಾಗಿ ಪ್ರತಿಜ್ಞೆ ಮಾಡಿದ್ದಾರೆ.
ನಾಗರಿಕ ಹಕ್ಕುಗಳ ಸಂಘಟನೆಯಾದ ಮುಸ್ಲಿಂ ವಕೀಲರಿಗೆ ಗುರುವಾರ ನೀಡಿದ ವಿಡಿಯೋ ಸಂದೇಶದಲ್ಲಿ, ಯುಎಸ್ನಲ್ಲಿ ದ್ವೇಷದ ಅಪರಾಧಗಳು ಹೆಚ್ಚಾಗುತ್ತಿದೆ. ಇದರ ವಿರುದ್ಧ ಹೋರಾಡಲು ಶಾಸಕರನ್ನು ಸದನಕ್ಕೆ ಕಳುಹಿಸುವ ಭರವಸೆ ಬಿಡನ್ ನೀಡಿದರು.
ಬಹುಮುಖ್ಯ ಆದೇಶಗಳ ಮೂಲಕ ಇರಾನ್ ಮತ್ತು ಸಿರಿಯಾ ಸೇರಿದಂತೆ ಹಲವಾರು ಮುಸ್ಲಿಂ ಬಹುಸಂಖ್ಯಾತ ರಾಷ್ಟ್ರಗಳ ಮೇಲೆ “ಮುಸ್ಲಿಂ ಸಂಚಾರ ನಿಷೇಧ” ವನ್ನು ಟ್ರಂಪ್ ಹೇರಿದ್ದರು. ಈ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗಿತ್ತು.