ಭೀಕರ ದುರಂತ: ಫುಟ್ ಪಾತ್ ನಲ್ಲಿ ಮಲಗಿದ್ದ ಕಾರ್ಮಿಕರ ಮೇಲೆ ಹರಿದ ಟ್ರಕ್| 13 ಮಂದಿ ದುರ್ಮರಣ

accident
Share on facebook
Share on twitter
Share on linkedin
Share on whatsapp
Share on telegram
Share on email
Share on print

ಸೂರತ್(19-01-2021): ಫುಟ್ ಪಾತ್ ನಲ್ಲಿ ಮಲಗಿದ್ದ ಕಾರ್ಮಿಕರ ಮೇಲೆ ಟ್ರಕ್ ಹರಿದು ಕನಿಷ್ಠ 13 ಮಂದಿ ಕಾರ್ಮಿಕರು ಮೃತಪಟ್ಟಿರುವ ದಾರುಣ ಘಟನೆ  ಗುಜರಾತ್ ನ ಸೂರತ್ ನಲ್ಲಿ ನಡೆದಿದೆ.

ಮೃತ ಕಾರ್ಮಿಕರು ರಾಜಸ್ಥಾನದ ಬನ್ಸ್ವಾರ ಮೂಲದವರಾಗಿದ್ದಾರೆ. ಇವರು ಕೆಲಸ ಹುಡುಕಿಕೊಂಡು ಸೂರತ್ ಗೆ ಬಂದಿದ್ದರು.  ಮೊದಲು ಕಬ್ಬು ತುಂಬಿದ್ದ ಟ್ರಾಕ್ಟರ್, ಟ್ರಕ್ಗೆ ಢಿಕ್ಕಿಯಾಗಿದೆ. ಬಳಿಕ ನಿಯಂತ್ರಣ ಕಳೆದುಕೊಂಡು ರಸ್ತೆ ಬದಿಯಲ್ಲಿ ಮಲಗಿದ್ದವರ ಮೇಲೆ  ಹರಿದಿದೆ.

ಪುಟ್ ಪಾತ್ ನಲ್ಲಿ 18 ಮಂದಿ ಕಾರ್ಮಿಕರು ಮಲಗಿದ್ದರು. ಅವರಲ್ಲಿ 13 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕೆಲವರು ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

 

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು