ವೆಂಕಟಾಪುರಂ(11-10-2020): ಟಿಆರ್ ಎಸ್ ಮುಖಂಡ ಮಧುರಿ ಭೀಮೇಶ್ವರ ರಾವ್ ಅವರನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ತೆಲಂಗಾಣದ ಮುಳುಗು ಜಿಲ್ಲೆಯ ವೆಂಕಟಾಪುರಂ ಮಂಡಲ್ ನ ಆಲುಬಾಕ ಗ್ರಾಮದಲ್ಲಿ ನಡೆದಿದೆ.
ಆರು ಮಂದಿ ಶಸ್ತ್ರಾಸ್ತ್ರ ಹೊಂದಿದ್ದ ವ್ಯಕ್ತಿಗಳು ಮನೆಗೆ ನುಗ್ಗಿ ಭೀಮೇಶ್ವರ ರಾವ್ ಅವರನ್ನು ಮನೆಯಿಂದ ಹೊರಗೆ ಎಳೆದು ಚೂರಿಯಿಂದ ಮನಬಂದಂತೆ ಇರಿದು ಕೊಲೆ ಮಾಡಿದ್ದಾರೆ. ಈ ವೇಳೆ ಕುಟುಂಬಸ್ಥರು ದುಷ್ಕರ್ಮಿಗಳಲ್ಲಿ ಬಿಡುವಂತೆ ಮನವಿಯನ್ನು ಮಾಡಿದ್ದಾರೆ. ಆದರೆ ಅವರನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ.
ಘಟನೆ ಸ್ಥಳದಲ್ಲಿ ಬರಹವೊಂದು ಪೊಲೀಸರಿಗೆ ಸಿಕ್ಕಿದೆ. ಕೃತ್ಯವನ್ನು ಮಾವೋವಾದಿಗಳು ನಡೆಸಿರುವ ಶಂಕೆ ವ್ಯಕ್ತವಾಗಿದೆ. ಘಟನೆ ಬಗ್ಗೆ ಪೊಲೀಸರು ಮಾಹಿತಿಯನ್ನು ನೀಡಿದ್ದು, ಮಾವೋವಾದಿಗಳು ಗ್ರಾಮದಲ್ಲಿ ತಮ್ಮ ಇರುವಿಕೆಯನ್ನು ತೋರಿಸಲು ಕೃತ್ಯ ನಡೆಸಿದ್ದಾರೆ ಎಂದು ಶಂಕಿಸಿದ್ದಾರೆ.