ನವದೆಹಲಿ(02-01-2021): ತ್ರಿವಳಿ ತಲಾಖ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗೆ ನಿರೀಕ್ಷಣಾ ಜಾಮೀನು ನೀಡಲು ಯಾವುದೇ ನಿರ್ಬಂಧವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಮುಸ್ಲಿಂ ಮಹಿಳೆಯ ವಿವಾಹದ ಹಕ್ಕುಗಳ ರಕ್ಷಣೆ ಕಾಯ್ದೆ 2019ರ ಪ್ರಕಾರ ಮುಸ್ಲಿಂ ಮಹಿಳೆಗೆ ‘ತ್ರಿವಳಿ ತಲಾಖ್’ ಮೂಲಕ ತ್ವರಿತಗತಿಯಲ್ಲಿ ವಿಚ್ಛೇದನ ನೀಡುವುದು ಶಿಕ್ಷಾರ್ಹ ಅಪರಾಧವಾಗಿದೆ.
ಈ ಕುರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ನೇತೃತ್ವದ ನ್ಯಾಯಪೀಠವು, ಪ್ರಕರಣದಲ್ಲಿ ಬಂಧನಕ್ಕೊಳಗಾದ ವ್ಯಕ್ತಿಗೆ ಜಾಮೀನು ನೀಡುವುದಕ್ಕೆ ನಿರ್ಬಂಧಗಳಿಲ್ಲ. ನ್ಯಾಯಾಲಯ ನಿರೀಕ್ಷಣಾ ಜಾಮೀನು ನೀಡುವ ಮುನ್ನ, ದೂರದಾರ ಮಹಿಳೆಯ ಅಭಿಪ್ರಾಯವನ್ನು ಕೇಳಬೇಕಿದೆ ಎಂದು ಹೇಳಿದೆ.