ಮುಂಬೈ(14-11-2020): ತ್ರಿವಳಿ ತಲಾಖ್ ಮೂಲಕ ಪತ್ನಿಗೆ ತಲಾಖ್ ನೀಡಿದ ವ್ಯಕ್ತಿಗೆ ಜಾಮೀನು ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.
ಮೂರನೇ ಹೆಂಡತಿಗೆ ವಿಚ್ಛೇದನ ತಲಾಖ್ ಮೂಲಕ ನೀಡಿದ ಮುಂಬೈ ನಿವಾಸಿ ಇಬ್ರಾಹಿಂ ಮೊಹಮ್ಮದ್ ಇಕ್ಬಾಲ್ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ನಿರಾಕರಿಸಿದೆ, ಅವರಿಗೆ 2019 ರಲ್ಲಿ ಇದು ಶಿಕ್ಷಾರ್ಹ ಅಪರಾಧವೆಂದು ಘೋಷಿಸಿ ಕೋರ್ಟ್ ಶಿಕ್ಷೆಯನ್ನು ವಿಧಿಸಿತ್ತು.
ನ್ಯಾಯಮೂರ್ತಿಗಳಾದ ಎ ಎಂ ಖಾನ್ವಿಲ್ಕರ್, ದಿನೇಶ್ ಮಹೇಶ್ವರಿ ಮತ್ತು ಸಂಜೀವ್ ಖನ್ನಾ ಅವರ ನ್ಯಾಯಪೀಠ ಅಕ್ಟೋಬರ್ 21 ರ ಬಾಂಬೆ ಹೈಕೋರ್ಟ್ ಆದೇಶಕ್ಕೆ ಮಧ್ಯಪ್ರವೇಶಿಸಲು ನಿರಾಕರಿಸಿದೆ.
ವಕೀಲ ಸುನಿಲ್ ಫರ್ನಾಂಡಿಸ್, ಇಕ್ಬಾಲ್ ಮೂವರು ಅಪ್ರಾಪ್ತ ಹೆಣ್ಣುಮಕ್ಕಳನ್ನು ಒಳಗೊಂಡಂತೆ ಐದು ಮಕ್ಕಳ ತಂದೆಯಾಗಿದ್ದು, ಮಕ್ಕಳು ಅವರ ಮೇಲೆ ಸಂಪೂರ್ಣವಾಗಿ ಅವಲಂಬಿತರಾಗಿದ್ದಾರೆ.ಆತನ ಬಂಧನದಿಂದ ಮಕ್ಕಳಿಗೆ ದಿಕ್ಕು ಇಲ್ಲದಾಗಿದೆ ಎಂದು ಕೋರ್ಟ್ ಗಮನಕ್ಕೆ ತಂದಿದ್ದರು.
ಅವರ ಮೂರನೇ ಪತ್ನಿ ಮುಂಬೈನ ಅಂಬೋಲಿ ಪೊಲೀಸ್ ಠಾಣೆಯಲ್ಲಿ ಇಕ್ಬಾಲ್ ವಿರುದ್ಧ ಐಪಿಸಿಯ ವಿವಿಧ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು.
;