ಬುಡಕಟ್ಟು ಬಾಲಕಿಯನ್ನು ತಿಂದು ಹಾಕಿದ ಹುಲಿ| ಈ ಗ್ರಾಮದಲ್ಲಿ ಪ್ರಾಣಿಗಳಿಗೆ ಆಹಾರವಾಗುತ್ತಿದ್ದಾರೆ ಬುಡಕಟ್ಟು ಜನರು!

tiger
Share on facebook
Share on twitter
Share on linkedin
Share on whatsapp
Share on telegram
Share on email
Share on print

ಪಾಟ್ನಾ(30-11-2020): ತೆಲಂಗಾಣದ ಕುಮಾರಂ ಭೀಮ್ ಆಸಿಫಾಬಾದ್ ಜಿಲ್ಲೆಯಲ್ಲಿ ಭಾನುವಾರ 16 ವರ್ಷದ ಬುಡಕಟ್ಟು ಬಾಲಕಿಯನ್ನು ಹುಲಿಯೊಂದು ಕೊಂದು ಹಾಕಿದೆ. ಈ ತಿಂಗಳು ಜಿಲ್ಲೆಯಲ್ಲಿ ನಡೆದ ಎರಡನೇ ಘಟನೆ ಇದಾಗಿದೆ.

ಪಶುಲಾ ನಿರ್ಮಲಾ ಎಂದು ಗುರುತಿಸಲ್ಪಟ್ಟ ಬಾಲಕಿ ಪೆಂಚಿಕಲಪೇಟ ಮಂಡಲದ ಕೊಂಡಪಲ್ಲಿ ಗ್ರಾಮದ ಬಳಿಯ ಮನ್ನೆವಾಡಾ ಕುಗ್ರಾಮದ ಹತ್ತಿರ ಹೊಲವೊಂದರಲ್ಲಿದ್ದಾಗ ಆಕೆಯ ಮೇಲೆ ಹುಲಿ ದಾಳಿ ಮಾಡಿದೆ.

ಹತ್ತಿರದ ಹೊಳೆಯಿಂದ ನೀರು ತರಲು ಹೋಗಿದ್ದ ಇಬ್ಬರು ಸಹೋದರರನ್ನು ಬಾಲಕಿ ಸಹಾಯಕ್ಕಾಗಿ ಕೂಗಿದ್ದಾಳೆ. ನಿರ್ಮಾಲಾಳನ್ನು ರಕ್ಷಿಸುವ ಪ್ರಯತ್ನದಲ್ಲಿ ಹುಡುಗರು ಕುಡಗೋಲುಗಳನ್ನು ಹುಲಿಯ ಮೇಲೆ ಎಸೆದಿದ್ದಾರೆ.

ಹುಲಿ ಬಾಲಕಿಯ ದೇಹವನ್ನು 50 ಮೀಟರ್ ಬೆಜ್ಜೂರ್ ಅರಣ್ಯ ವ್ಯಾಪ್ತಿಗೆ ಎಳೆದೊಯ್ದು ಕಣ್ಮರೆಯಾಯಿತು, ಅವಳ ಅರ್ಧ ತಿನ್ನಲಾದ ದೇಹವನ್ನು ನಂತರ ನಾವು ಕಂಡಿದ್ದೇವೆ. ದಾಳಿಗೆ ಮೂರು ದಿನಗಳ ಮೊದಲು ಸ್ಥಳೀಯರು ಹುಲಿಯೊಂದನ್ನು ಪತ್ತೆ ಹಚ್ಚಿದ್ದಾರೆ ಎಂದು ಸ್ಥಳೀಯರು ಹೇಳಿದ್ದಾರೆ.

ಅರಣ್ಯ ಅಧಿಕಾರಿಗಳು, ಪೊಲೀಸರೊಂದಿಗೆ ಸ್ಥಳಕ್ಕೆ ಧಾವಿಸಿದರು. ಇದಕ್ಕೂ ಮುನ್ನ ನವೆಂಬರ್ 11 ರಂದು ಆಸಿಫಾಬಾದ್ ವಿಭಾಗದ ರೆಬನ್ನಾ ಶ್ರೇಣಿಯ ಗಿರೆಲ್ಲಿ ಅರಣ್ಯ ಪ್ರದೇಶದಲ್ಲಿ ಹುಲಿಯಿಂದ 20 ವರ್ಷದ ಬುಡಕಟ್ಟು ಯುವಕನನ್ನು ತಿಂದು ಹಾಕಿತ್ತು.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು