ಬುಡಕಟ್ಟು ಜನಾಂಗದ  ಬಾಲಕಿ ಮೇಲೆ ಗ್ಯಾಂಗ್ ರೇಪ್

crime news
Share on facebook
Share on twitter
Share on linkedin
Share on whatsapp
Share on telegram
Share on email
Share on print

ಛತ್ತೀಸ್‌ ಗಡ(24-11-2020): ಛತ್ತೀಸ್‌ ಗಡ ಕಬೀರ್‌ಹ್ಯಾಮ್ ಜಿಲ್ಲೆಯಲ್ಲಿ 14 ವರ್ಷದ ಬುಡಕಟ್ಟು ಬಾಲಕಿಯನ್ನು ನಾಲ್ಕು ಅಪರಿಚಿತ ವ್ಯಕ್ತಿಗಳು ಅತ್ಯಾಚಾರ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಾವರ್ಧ ಪಟ್ಟಣದ ಸಿಟಿ ಕೊಟ್ವಾಲಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಭಾನುವಾರ ರಾತ್ರಿ ಈ ಘಟನೆ ನಡೆದಿದ್ದು, ಸಂತ್ರಸ್ತೆ ಪುರುಷ ಸ್ನೇಹಿತನೊಂದಿಗೆ ಹೊರಗೆ ಹೋಗಿದ್ದಾಗ ಘಟನೆ ನಡೆದಿದೆ ಎಂದು ಕಬೀರ್ಧಾಮ್ ಪೊಲೀಸ್ ವರಿಷ್ಠಾಧಿಕಾರಿ ಶಲಾಭ್ ಸಿನ್ಹಾ ತಿಳಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಕೆಲವು ಶಂಕಿತರನ್ನು ವಿಚಾರಣೆಗಾಗಿ ವಶಕ್ಕೆ ತೆಗೆದುಕೊಳ್ಳಲಾಗಿದೆ, ಆದರೆ ಇದುವರೆಗೂ ಯಾರನ್ನೂ ಬಂಧಿಸಿಲ್ಲ ಎಂದು ಅವರು ಹೇಳಿದರು.

ಬಾಲಕಿಯ ದೂರಿನ ಪ್ರಕಾರ, ಬಾಲಕಿಯನ್ನು ತಡೆದ ನಾಲ್ವರು ಆರೋಪಿಗಳು ಆಕೆಯೊಂದಿಗಿದ್ದ ಸ್ನೇಹಿತನನ್ನು ಸ್ಥಳದಿಂದ ತೆರಳುವಂತೆ ಹೇಳಿದ್ದಾರೆ. ಬಳಿಕ ಅಪ್ರಾಪ್ತ ಬಾಲಕಿಯನ್ನು ಪ್ರತ್ಯೇಕ ಸ್ಥಳಕ್ಕೆ ಎಳೆದೊಯ್ದು ಅತ್ಯಾಚಾರ ಮಾಡಿದ್ದಾರೆ.

ಸಹಾಯಕ್ಕಾಗಿ ಬಾಲಕಿಯ ಕಿರುಚಾಟ ಕೇಳಿದ ಕೆಲವು ಸ್ಥಳೀಯರು ಪೊಲೀಸ್ ಗಸ್ತು ತಂಡವನ್ನು ಸಂಪರ್ಕಿಸಿ ತಕ್ಷಣ ಮಾಹಿತಿ ನೀಡಿದ್ದಾರೆ. ಜನರು ಬರುವುದನ್ನು ಗಮನಿಸಿದ ಯುವಕರ ತಂಡ ಬಾಲಕಿಯನ್ನು ಬಿಟ್ಟು ಪರಾರಿಯಾಗಿದ್ದಾರೆ.

ಬಳಿಕ ಬಾಲಕಿ ಅಪರಿಚಿತ ಆರೋಪಿಗಳ ವಿರುದ್ಧ ಸಿಟಿ ಕೊಟ್ವಾಲಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ

 

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು