ಬೆಂಗಳೂರು(31-12-2020): ಗ್ರಾಮ ಪಂಚಾಯತ್ ಚುನಾವಣೆಯ ಫಲಿತಾಂಶ ಹೊರಬೀಳುತ್ತಿದ್ದಂತೆ ರಾಜ್ಯದಲ್ಲಿ ಇತಿಹಾಸವೊಂದು ನಿರ್ಮಾಣವಾಗಿದೆ.ಆನೇಕಲ್ ತಾಲ್ಲೂಕಿನ ದೊಮ್ಮಸಂದ್ರ ಗ್ರಾಮ ಪಂಚಾಯಿತಿಯ 13ನೇ ವಾರ್ಡ್ನ ಸದಸ್ಯರಾಗಿ ಮಂಗಳಮುಖಿ ಆರತಿ ಜವರಗೌಡ 80ಕ್ಕೂ ಹೆಚ್ಚು ಶೇಕಡಾ ಮತಗಳಿಂದ ಗೆಲುವನ್ನು ಸಾಧಿಸಿದ್ದಾರೆ.
ಗ್ರಾಮದ 778 ಮತಗಳ ಪೈಕಿ 527 ಮತಗಳನ್ನು ಪಡೆದುಕೊಂಡು ಆರತಿ ಜವರಗೌಡ ಆಯ್ಕೆಯಾಗಿದ್ದಾರೆ. ಲಾಕ್ಡೌನ್ ಸಂದರ್ಭದಲ್ಲಿ ಮಂಗಳಮುಖಿಯರೆಲ್ಲ ಸೇರಿ ದವಸ ಧಾನ್ಯ, ಆಹಾರದ ಕಿಟ್ ಪೂರೈಕೆ ಮಾಡಿ ಗ್ರಾಮದ ಜನರ ಮನಸ್ಸನ್ನು ಗೆದ್ದಿದ್ದರು. ತಮ್ಮ ವ್ಯಾಪ್ತಿ ಮತ್ತು ನೋವನ್ನು ಬದಿಗೊತ್ತಿ ಜನರ ಸೇವೆಗೆ ಆರತಿ ಜವರಗೌಡ ಟೀಂ ಮುಂದಾಗಿತ್ತು.
ಚುನಾವಣೆ ಬಂದಾಗ ಸ್ಪರ್ಧಿಸುವಂತೆ ಗ್ರಾಮದ ಜನರು ಹೇಳಿದ್ದರು. ನಾಮಪತ್ರ ಸಲ್ಲಿಸುವಂತೆ ಒತ್ತಾಯಿಸಿ ನನ್ನ ಪರ ಪ್ರಚಾರ ನಡೆಸಿದ್ದರು. ಈಗ ಅವರೇ ಗೆಲ್ಲಿಸಿದ್ದಾರೆ ಎಂದು ಆರತಿ ಸಂತಸ ವ್ಯಕ್ತಪಡಿಸಿದ್ದಾರೆ.