ಅನ್ನದಾತರ ಟ್ರ್ಯಾಕ್ಟರ್ ರ್ಯಾಲಿ| ಪೊಲೀಸರನ್ನು ಕ್ಯಾರೇ ಎನ್ನದೆ ದೆಹಲಿ ಪ್ರವೇಶ

tracter period
Share on facebook
Share on twitter
Share on linkedin
Share on whatsapp
Share on telegram
Share on email
Share on print

ನವದೆಹಲಿ(26-01-2021): ರೈತವಿರೋಧಿ ನೂತನ ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಆಗ್ರಹಿಸಿ ರೈತರು ನಡೆಸುತ್ತಿರುವ ಬೃಹತ್ ಟ್ರ್ಯಾಕ್ಟರ್ ರ್ಯಾಲಿ ದೆಹಲಿಯನ್ನು ಪ್ರವೇಶಿಸಿದೆ.

ಸಿಂಘು ಗಡಿಯಲ್ಲಿ ಪೊಲೀಸರನ್ನು ಕ್ಯಾರೇ ಎನ್ನದೆ ರೈತರು ದೆಹಲಿಯನ್ನು ಪ್ರವೇಶಿಸಿದ್ದಾರೆ.ದೆಹಲಿ ತಲುಪಿರುವ ರೈತರ ಟ್ರ್ಯಾಕ್ಟರ್ ರ್ಯಾಲಿ ಇದೀಗ ಕಾಂಜವಾಲಾ ಚೌಕ್-ಔಚಾಂಡಿ ಗಡಿ-ಕೆಎಂಪಿ-ಜಿಟಿ ರಸ್ತೆ ಜಂಕ್ಷನ್ ಕಡೆಗೆ ಸಾಗುತ್ತಿದೆ ಎಂದು ವರದಿಗಳು ತಿಳಿಸಿವೆ.

ಪೊಲೀಸರು ಪರೇಡ್‌ ತಡೆಯಲು ಬೆಳ್ಳಂಬೆಳಗ್ಗೆಯೇ ಬ್ಯಾರಿಕೇಡ್‌ಗಳನ್ನು ರಸ್ತೆಗೆ ಅಡ್ಡಲಾಗಿ ಜೋಡಿಸಿದ್ದರು. ಇದರಿಂದ ಸಿಟ್ಟಾಗಿರುವ ರೈತರು 12 ಗಂಟೆಗೆ ನಿಗದಿ ಮಾಡಿದ್ದ ರ್‍ಯಾಲಿಯನ್ನು 8 ಗಂಟೆಗೆ ಆರಂಭಿಸಿದ್ದು, ಪೊಲೀಸರ ಬ್ಯಾರಿಕೇಡ್ ಭೇದಿಸಿ ಟ್ರಾಕ್ಟರ್‌ ರ್‍ಯಾಲಿ ಹೊರಟಿದ್ದಾರೆ. ರ್‍ಯಾಲಿಯು ಶಾಂತಿಯುತವಾಗಿ ನಡೆಯುತ್ತಿದ್ದು ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆದಿಲ್ಲ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು