ಕೆಂಪು ಕೋಟೆ ಮೇಲೆ ಹಾರಾಡಿದ ಸಿಖ್ ಧ್ವಜಕ್ಕೂ ಬಿಜೆಪಿಗೂ ನಂಟು? ಸಂಶಯ ಬಲಗೊಳಿಸಿದ ಸಾಕ್ಷಿ!

rally
Share on facebook
Share on twitter
Share on linkedin
Share on whatsapp
Share on telegram
Share on email
Share on print

ನವದೆಹಲಿ(27-01-2021): ದೆಹಲಿಯಲ್ಲಿ ಕೆಂಪುಕೋಟೆಗೆ ತೆರಳಿ ರೈತರು ಭಾರತದ ಧ್ವಜವನ್ನು ಕಿತ್ತು ಸಿಖ್ ಧರ್ಮದ ಧ್ವಜವನ್ನು ಹಾರಿಸಿದ್ದಾರೆ ಎಂಬಂತಹ ಆಪಾದನೆಯ ಬೆನ್ನಲ್ಲೇ ಈ ಕೃತ್ಯದಲ್ಲಿ ಬಿಜೆಪಿಗರೇ ಭಾಗವಹಿಸಿದ್ದಾರಾ ಎನ್ನುವ ಸಂಶಯ ಇದೀಗ ಬಲವಾಗಿದೆ.

ದೆಹಲಿಯ ಕೆಂಪುಕೋಟೆಯ ಮೇಲೆ ಧ್ವಜ ಹಾರಿಸಿದ ಗುಂಪಿನ ಪ್ರಮುಖ ವ್ಯಕ್ತಿಗಳಲ್ಲೊಬ್ಬ ಪಂಜಾಬ್ ಚಿತ್ರ ನಟ ದೀಪ್ ಸಿಧು ಎಂದು ಗುರುತಿಸಲಾಗಿದ್ದು, ಬಿಜೆಪಿಯೊಂದಿಗಿನ ಈತನ ಸಂಬಂಧದ ಕುರಿತು ಫೋಟೋಗಳು ವೈರಲ್ ಆಗಿದೆ.

ಟ್ರ್ಯಾಕ್ಟರ್ ರ್ಯಾಲಿ ನಡೆಸುತ್ತಿದ್ದವರು ಕೆಂಪುಕೋಟೆಗೆ ಧಾವಿಸಿದ ಗುಂಪಿನಲ್ಲಿ ದೀಪ್ ಸಿಧು ಇದ್ದ ಬಗ್ಗೆ  ಚಂಢೀಗಡದ ಪ್ರಮುಖ ಪತ್ರಿಕೆ ದಿ ಟ್ರಿಬ್ಯೂನ್ ಹಾಗೂ ಪಂಜಾಬ್ ನ್ಯೂಸ್ ಎಕ್ಸ್‍ಪ್ರೆಸ್‍ಗಳ ಜಾಲತಾಣಗಳು ಸುದ್ದಿ ಪ್ರಕಟಿಸಿವೆ.

ಈ ಬಗ್ಗೆ ಖ್ಯಾತ ವಕೀಲ, ಪ್ರಶಾಂತ್ ಭೂಷಣ್ ಅವರು ಟ್ವೀಟ್ ಮಾಡಿದ್ದು, ಮೋದಿ ಮತ್ತು ಅಮಿತ್‍ಶಾ ಅವರೊಂದಿಗೆ ದೀಪು ಸಿಧು ಇರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಇದರಿಂದಾಗಿ ಪ್ರತಿಭಟನೆಯ ದಿಕ್ಕನ್ನು ತಪ್ಪಿಸುವ ದೃಷ್ಟಿಯಿಂದ ಉದ್ದೇಶಪೂರ್ವಕವಾಗಿ ಬಿಜೆಪಿ ಬೆಂಬಲಿತ  ಸಿಧು ಪ್ರತಿಭಟನಾಕಾರರನ್ನು ಕೆಂಪುಕೋಟೆ ಕಡೆ ಕರೆದುಕೊಂಡು ಹೋಗಿ ಧ್ವಜವನ್ನು ಹಾರಿಸುವಂತೆ ಪ್ರಚೋದಿಸಿದ್ದಾರೆಯಾ ಎಂಬ ಪ್ರಶ್ನೆ ಮೂಡಿದೆ. ಈ ಮೊದಲು ಪ್ರತಿಭಟನಾಕಾರರನ್ನು ಬಿಜೆಪಿ ಭಯೋತ್ಪಾದಕರು, ಖಲಿಸ್ತಾನಿಗಳು ಎಂದು ಅಪರಾಧಿಗಳಂತೆ ಚಿತ್ರಿಸಲು ಪ್ರಯತ್ನಿಸಿತ್ತು. ಇದೀಗ ಇಂತಹ ಯತ್ನದ ಭಾಗವಾಗಿಯೇ ಧ್ವಜ ಹಾರಾಟ ನಡೆದಿದೆಯಾ ಎಂಬ ಪ್ರಶ್ನೆ ಮೂಡಿದೆ.

 

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು